ಮೈತ್ರಿ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಬಿಡುಗಡೆಗೆ ಸಿದ್ಧವಾದ ಮೈತ್ರಿ

ಬಿ ಎಂ ಗಿರಿರಾಜ್ ನಿರ್ದೇಶನದ ನಾಲ್ಕನೇ ಚಲನಚಿತ್ರ 'ಮೈತ್ರಿ'

ಬೆಂಗಳೂರು: ಬಿ ಎಂ ಗಿರಿರಾಜ್ ನಿರ್ದೇಶನದ ನಾಲ್ಕನೇ ಚಲನಚಿತ್ರ 'ಮೈತ್ರಿ' ಬಿಡುಗಡೆಗೆ ಸಿದ್ಧವಾಗಿದೆ. ಇದರ ರೀ ರೆಕಾರ್ಡಿಂಗ್ ಕೆಲಸ ಈಗ ತಾನೇ ಮುಗಿದಿದ್ದು, ಫೆಬ್ರವರಿಯಲ್ಲಿ ತೆರೆ ಕಾಣುವ ಸಾಧ್ಯತೆ ಇದೆ ಎಂದಿದ್ದಾರೆ ನಿರ್ಮಾಪಕ ಎನ್ ಎಸ್ ರಾಜಕುಮಾರ್. ಚಿತ್ರೀಕರಣ ಕಳೆದ ವರ್ಷವೇ ಮುಗಿದಿದ್ದರೂ, ಚಿತ್ರದ ಸಂಗೀತ ನಿರ್ದೇಶಕ ಇಳಯರಾಜ ಅವರ ಅನಾರೋಗ್ಯದ ಕಾರಣ ಸಿನೆಮಾದ ಹಾಡುಗಳ ರೀ ರೆಕಾರ್ಡಿಂಗ್ ಸ್ವಲ್ಪ ತಡವಾಗಿತ್ತು.

ಇತ್ತೀಚೆಗಷ್ಟೇ ತಮ್ಮ "ಜಟ್ಟ" ಚಲನಚಿತ್ರ ಎರಡನೆ ಅತ್ಯುತ್ತಮ ಸಿನೆಮಾ ರಾಜ್ಯ ಪ್ರಶಸ್ತಿ ಪಡೆದಿರುವುದರಿಂದ ಸಂತಸದಲ್ಲಿರುವ ನಿರ್ದೇಶಕರಿಗೆ ಈಗ 'ಮೈತ್ರಿ' ಸಿನೆಮಾ ಬಿಡುಗಡೆಯಾಗುತ್ತಿರುವುದು ಡಬಲ್ ಧಮಾಕ. ತಮ್ಮ ಕನಸಿನ ಪಾತ್ರವರ್ಗ ಮತ್ತು ತಂತ್ರಜ್ಞರ ಜೊತೆ ಈ ಸಿನೆಮಾ ಮಾಡಿರುವುದಕ್ಕೆ ಸಂತಸದಲ್ಲಿರುವ ಅವರು ಸಿನೆಮಾ ಉತ್ತಮವಾಗಿ ಪ್ರದರ್ಶನಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾರಾಗಣದಲ್ಲಿ ಪುನೀತ್ ರಾಜಕುಮಾರ್, ಮೋಹನ್ ಲಾಲ್ ಮತ್ತು ಅತುಲ್ ಕುಲಕರ್ಣಿ ಜೊತೆಯಾಗಿ ನಟಿಸಿರುವುದು ಸಿನೆಮಾದ ವಿಷೇಶ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT