ಬೆಂಗಳೂರು: ನಟಿ ಪೂಜಾ ಗಾಂಧಿ ನಿರ್ಮಿಸಿರುವ, ಸತೀಶ್ ಪ್ರಧಾನ್ ನಿರ್ದೇಶನದ 'ಅಭಿನೇತ್ರಿ' ಹಲವಾರು ಅಡೆತಡೆಗಳನ್ನು ಕಂಡ ಮೇಲೆ ಈಗ ಬಿಡುಗಡೆಗೆ ಸಿದ್ಧವಾಗಿದೆ. ಸಿನೆಮಾ ಜನವರಿ ೩೦ ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಪೂಜಾ ಗಾಂಧಿ ತಿಳಿಸಿದ್ದಾರೆ. ಇದಲ್ಲದೆ, 'ಅಭಿನೇತ್ರಿ'ಗೆ ಮನರಂಜನಾ ತೆರಿಗೆಯಿ ವಿನಾಯಿತಿ ಕೂಡ ಸಿಗಲಿದೆ ಎನ್ನಲಾಗಿದೆ. "ಒಳ್ಳೆಯ ಸಾಮಾಜಿಕ ಸಂದೇಶ ಇರುವ ಅಸಲಿ ಸಿನೆಮಾ ಇದು. ಇದಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಗಣನೆಗೆ ತೆಗೆದುಕೊಂಡಿರುವುದು ನನಗೆ ಸಂತಸ ತಂದಿದೆ. ಇದರ ಕಂಟೆಂಟ್ ಮೇಲೆ ಭಾರ ಹಾಕಿ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸಿದ್ದೇನೆ. ಸಿನೆಮಾಗೆ ತೆರಿಗೆ ವಿನಾಯಿತಿ ಸ್ಥಾನಮಾನ ಸಿಗಲಿದೆ ಎಂಬ ನಂಬಿಕೆ ಇದೆ" ಎನ್ನುತ್ತಾರೆ ಪೂಜಾ ಗಾಂಧಿ.
"ಅಭಿನೇತ್ರಿ ಹಿಂದಿನ ದಿನಗಳ ಖ್ಯಾತ ನಟಿಯ ಮೇಲೆ ತೆಗೆದಿರುವ ಚಿತ್ರ. ಸಿನೆಮಾಗೆ ನಾನೇ ಧ್ವನಿ ನೀಡಿದ್ದೇನೆ. ಇದನ್ನು ಬೇರೆ ಬಾಷೆಗಳಿಗೂ ಡಬ್ಬಿಂಗ್ ಮಾಡಲು ಚಿಂತನೆ ನಡೆಸಿದ್ದೇನೆ" ಎನ್ನುತ್ತಾರೆ ಪೂಜಾ ಗಾಂಧಿ.