ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 
ಸಿನಿಮಾ ಸುದ್ದಿ

ಹಂಚಿಕೆದಾರರಿಗೆ ನಷ್ಟ ಭಾವುಕರಾದ ರಾಕ್‌ಲೈನ್

ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ಲಿಂಗಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್...

ಬೆಂಗಳೂರು: ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ಲಿಂಗಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರಾ? ಲಿಂಗಾ ಚಿತ್ರದಿಂದ ಆರ್ಥಿಕವಾಗಿ ತಮಗೆ ಭಾರೀ ನಷ್ಟವಾಗಿದೆಯೆಂದು ವಿತರಕರು ಪ್ರತಿಭಟನೆ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ರಾಕ್‌ಲೈನ್ ವೆಂಕಟೇಶ್ ಮಾತನಾಡುತ್ತಾ ಭಾವುಕರಾಗಿ ಕಣ್ಣೀರಿಟ್ಟರು ಎಂದು ಚೆನ್ನೈನ ಸುದ್ದಿ ಮೂಲವೊಂದು ಹೇಳಿದೆ.

ದೊಡ್ಡ ಮೊತ್ತಕ್ಕೆ ಲಿಂಗಾ ಚಿತ್ರದ ಹಂಚಿಕೆ ಪಡೆದಿದ್ದ ವಿತರಕರಿಗೆ ಈ ಚಿತ್ರದಿಂದ ಅಪಾರ ನಷ್ಟವಾಗಿದೆ ಎಂಬ ಸುದ್ದಿ ಕಳೆದ ನಾಲ್ಕು ವಾರಗಳಿಂದ ಹರಿದಾಡುತ್ತಲೇ ಇದ್ದು ಶನಿವಾರದಂದು ನಷ್ಟಕ್ಕೊಳಗಾದ ಹಲವು ಹಂಚಿಕೆದಾರರು ಚೆನ್ನೈಯಲ್ಲಿ ನಿರಶನ ಮಾಡಿದ್ದರು. ಮರೀನಾ ಪಿಕ್ಚರ್ಸ್‌ನ ಸಿಂಗಾರವೇಲನ್ ಸೇರಿದಂತೆ ಇನ್ನಿತರ ಹಂಚಿಕೆದಾರರು, ಈ ಚಿತ್ರದಿಂದಾಗಿರುವ ನಷ್ಟ ತುಂಬಿ ಕೊಡುವಂತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗೆ ಮಾತನಾಡಲು ಮಧ್ಯಪ್ರವೇಶಿಸಬೇಕೆಂದು ರಜನೀಕಾಂತ್‌ರನ್ನು ವಿನಂತಿಸಿಕೊಂಡಿದ್ದರು.

ಈ ತನಕ ರಜನಿ ಅಥವಾ ರಾಕ್‌ಲೈನ್ ಆಗಲೀ ಚಿತ್ರದ ಆರ್ಥಿಕ ವಹಿವಾಟಿನ ಬಗ್ಗೆ, ವಿತರಕರ ಸಂಕಷ್ಟದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ವಿತರಕರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಲು ರಾಕ್‌ಲೈನ್ ವೆಂಕಟೇಶ್ ಫೋನ್‌ನಲ್ಲಿಯೂ ಲಭ್ಯವಿಲ್ಲದ ಕಾರಣ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾರಿಂದ ಹೊಸ ಪಕ್ಷ ಸ್ಥಾಪನೆ; ರಾಮನಾಥಪುರಂನಲ್ಲಿ ಧ್ವಜ ಅನಾವರಣ

SCROLL FOR NEXT