ಭಾಗ್ಯರಾಜ್ ಫಸ್ಟ್‌ಲುಕ್ 
ಸಿನಿಮಾ ಸುದ್ದಿ

ಹೆಸ್ರು ಮಾತ್ರ ನಕಲು ಸಿನ್ಮಾ ಪಕ್ಕಾ ಒರಿಜಿನಲ್ಲು!

ನಕಲು ಮಾಡಬೇಡಿ ಮನುಜರೇ...ಅಸಲು ಮರೀಬೇಡಿ ಮರುಳರೆ! ಲೆಕ್ಕಾಚಾರ...ನಿಮ್ ಗ್ರಹಚಾರ...ಎಲ್ಲಾ ಪಲ್ಟಿ ಹೊಡೆದರೆ ಬಯಲಲೇ ಕ್ಯಾಬರೆ!!

ನಕಲು ಮಾಡಬೇಡಿ ಮನುಜರೇ...ಅಸಲು ಮರೀಬೇಡಿ ಮರುಳರೆ! ಲೆಕ್ಕಾಚಾರ...ನಿಮ್ ಗ್ರಹಚಾರ...ಎಲ್ಲಾ ಪಲ್ಟಿ ಹೊಡೆದರೆ ಬಯಲಲೇ ಕ್ಯಾಬರೆ!!

ಈ ಹಾಡಿನ ಲೈನುಗಳನ್ನೊಮ್ಮೆ ಗಮನಿಸಿ. ಇದನ್ನು ಗಾಂಧಿನಗರಕ್ಕೆ ಸೀಮಿತಗೊಳಿಸೋದಾದ್ರೆ ರೀಮೇಕ್ ಮಾಡೋವ್ರನ್ನ ಮೂರೇ ಸಾಲಲ್ಲಿ ಬೆತ್ತಲೆ ಮಾಡಿದಂತಿರೋ ಹಾಗಿಲ್ವಾ?

ಹೀಗೊಂದು ಹೊರಾರ್ಥ ಕಾಣಿಸಿದರೂ ವಿ. ಮನೋಹರ್ ಬರೆದಿರುವ ಈ ಹಾಡು ಅದಕ್ಕೂ ಮೀರಿದ ಭರ್ಜರಿ ಫಿಲಾಸಫಿಗಳನ್ನು ಹೇಳಿದೆ. ಹಾಡನ್ನು ಪೂರ್ತಿ ಕೇಳಬೇಕಂದ್ರೆ ನೀವು ಸದ್ಯಕ್ಕೆ ಯೂಟ್ಯೂಬ್ ಹೊಕ್ಕು ಭಾಗ್ಯರಾಜ್-ನಕಲು ಮಾಡಬೇಡಿ ಅಂತ ಟೈಪ್ ಹೊಡಿಬೇಕು.

ಇದು ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಭಾಗ್ಯರಾಜ್ ಎಂಬ ಚಿತ್ರದ ಫಸ್ಟ್‌ಲುಕ್ ಬಗೆಗಿನ ಸುದ್ದಿ. ಭಾಗ್ಯರಾಜ್ ಚಿತ್ರ ಒಂದೂವರೆ ವರ್ಷಕ್ಕೆ ಮೊದಲು ಮುಹೂರ್ತ ಆಚರಿಸಿಕದಾಗಲೇ ತನ್ನ ರೆಟ್ರೋ ಶೈಲಿಯ ಪೋಸ್ಟರ್‌ನಿಂದ ನಿರೀಕ್ಷೆ ಹುಟ್ಟಿಸಿತ್ತು. ಆನಂತರ ಚಿತ್ರ ನಿಂತೇ ಹೋಯ್ತೇನೋ ಎಂಬೆಲ್ಲ ಗುಸುಗುಸುಗಳು ಶುರುವಾಗಿ ಸಿನಿಮಾ ಮರೆತೇ ಹೋಗುವಂತಾಗೋ ಹೊತ್ತಿಗೆ ಭಾಗ್ಯರಾಜ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ! ಇನ್ನೂ ಅಬ್ಬರದಿಂದ!

ಅನೂಪ್ ಸೀಳಿನ್ ಸಂಗೀತದಲ್ಲಿ ಮನೋಹರ್ ಬರೆದಿರುವ ಹಾಡಿಗೆ ವಾರಿಜಶ್ರೀ ದನಿ ನೀಡಿದ್ದು ಚಿತ್ರದ ಕೆಲವು ತುಣುಕುಗಳ ಮಧ್ಯೆ ಈ ಮೂರೂ ತೆರೆಹಿಂದಿನ ಪಾತ್ರಗಳು ಕಾಣಿಸಿಕೊಳ್ಳುತ್ತಾ ರಾಕ್ ಶೈಲಿಯ ಹಾಡು ಮತ್ತು ಸೇಪಿಯಾ ಮಾದರಿಯ ಕಲರಿಂಗ್‌ನಲ್ಲಿ ಪೂರ್ತಿಯಾಗಿ ಆವರಿಸಿಕೊಳ್ಳುತ್ತವೆ.

ಸಿದ್ದರಾಜು ನಿರ್ಮಾಣದ ಈ ಚಿತ್ರ ಆರ್ಥಿಕ ತೊಂದರೆಗಳಿಂದ ಕೊಂಚ ತಡವಾಯಿತೆಂಬ ಮಾತು ಕೇಳಿಬಂದಿತ್ತು. ಡಿಐ ಹಂತದಲ್ಲಿರುವ ಭಾಗ್ಯರಾಜ್ ಚಿತ್ರವನ್ನು ಎಡಿಟಿಂಗ್ ಮತ್ತು ರಿರೆಕಾರ್ಡಿಂಗ್ ಟೇಬಲ್‌ನಲ್ಲಿ ನೋಡಿದವರು ಈ ಚಿತ್ರ ತಮಿಳಿಗೆ ರೀಮೇಕ್ ಆಗುವುದು ಖಂಡಿತಾ ಎಂದು ನುಡಿಯುತ್ತಿದ್ದಾರೆ. ಉಪೇಂದ್ರ ಮತ್ತು ಎಎಮ್‌ಆರ್ ರಮೇಶ್ ಚಿತ್ರಗಳಿಗೆ ಸಹಾಯಕರಾಗಿ ದುಡಿದ ಅನುಭವವಿರುವ ದೀಪಕ್ ಮಧುವನಹಳ್ಳಿ ನಿರ್ದೇಶನದ ಬಗ್ಗೆ ಪ್ರಶಂಸೆಯ ಮಾತುಗಳು ಬರಲಾರಂಭಿಸಿವೆ. ಖುದ್ದು ತಮಿಳಿನ ಹಿಟ್ ನಿರ್ದೇಶಕ ಸಮುದ್ರಖಣಿ ಭಾಗ್ಯರಾಜ್ ಚಿತ್ರ ನೋಡಿ ಅಚ್ಚರಿ ಪಟ್ಟಿದ್ದಾರೆ.

ಚಿತ್ರದಲ್ಲಿ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತಿರುವುದು ಈಗಷ್ಟೇ ಬಂದಿರುವ ಸುದ್ದಿ. ಯೂಟ್ಯೂಬ್‌ನಲ್ಲಿ ಹಿಟ್ ಆಗುವ ಲಕ್ಷಣ ತೋರಿರುವ ಈ ವೀಡಿಯೋ ಬೆನ್ನಲ್ಲೇ ಲೂಸ್ ಮಾದ ಅಭಿನಯದ ಒಂದು ಹಿಟ್ ಹಾಡು ಕೂಡ ಬಿಡುಗಡೆಯಾಗಲಿದ್ದು, ಆ ಹಾಡು ಭಾಗ್ಯರಾಜ್ ಚಿತ್ರದ ಬಗೆಗಿನ ಕ್ರೇಜನ್ನು ಇನ್ನಷ್ಟು ಹೆಚ್ಚಿಸಲಿದೆಯಂತೆ. ಅಲ್ಲಿಗೆ ಅನೂಪ್ ಸೀಳಿನ್ ಹಿಟ್ ಲಿಸ್ಟ್‌ಗೆ ಭಾಗ್ಯರಾಜ್ ಹೊಸ ಸೇರ್ಪಡೆ ಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!