ಇಳಯರಾಜ 
ಸಿನಿಮಾ ಸುದ್ದಿ

ಇಳಯರಾಜ ಎದುರು ಹಾಡುವ ಧೈರ್ಯ ಎಂದೂ ಮಾಡಲಿಲ್ಲ: ಬಿಗ್ ಬಿ

ಒಂದು ಸಾವಿರದ ಸಿನೆಮಾಗೆ ಸಂಗೀತ ನಿರ್ದೇಶನ ಪೂರೈಸಿರುವ ಇಳಯರಾಜ...

ಮುಂಬೈ: ಒಂದು ಸಾವಿರದ ಸಿನೆಮಾಗೆ ಸಂಗೀತ ನಿರ್ದೇಶನ ಪೂರೈಸಿರುವ ಇಳಯರಾಜ ಅವರನ್ನು ಅಭಿನಂದಿಸಿ ಅವರ ಜೊತೆ ಕೆಲಸ ಮಾಡಿದ ನೆನಪುಗಳನ್ನು ಹಂಚಿಕೊಂಡ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಈ ದೈತ್ಯ ಸಂಗೀತ ನಿರ್ದೇಶಕನ ಎದುರು ಹಾಡಲು ಎಂದೂ ಧೈರ್ಯ ಸಾಲಲಿಲ್ಲ ಎಂದಿದ್ದಾರೆ.

"ಅವರ ಮುಂದೆ ಹಾಡಲು ಎಂದೂ ಧೈರ್ಯ ಮಾಡಲಿಲ್ಲ ಏಕೆಂದರೆ ನನಗೆ ನಾಚಿಕೆಯಾಗುತ್ತಿತ್ತು. ಪ್ರತಿ ಬಾರಿ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲು ಪ್ರತ್ಯೇಕವಾಗಿ ಕುಳಿತಿರುತ್ತಿದ್ದೆ. ... 'ಪಾ' ಸಿನೆಮಾ ವೇಳೆಯಲ್ಲಿ ಒಮ್ಮೆ ರಾಜಾ ಸಾಹೇಬರ ಎದುರಿಗೆ ಹಾಡಬೇಕಿತ್ತು. ಆಗ ನಾನೆಷ್ಟು ಭಯಭೀತನಾಗಿದ್ದೆ ಎಂದು ಹೇಳುವುದು ಕಷ್ಟ." ಎಂದು 'ಶಮಿತಾಬ್' ಚಲನಚಿತ್ರದ ಸಂಗೀತ ಆಲ್ಬಮ್ ಬಿಡುಗಡೆ ವೇಳೆಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ಇಳಯರಾಜ ಅವರನ್ನು ಜೀನಿಯಸ್ ಎಂದಿರುವ ಬಿಗ್ ಬಿ, " ಅವರು ನನ್ನನ್ನು ತಿದ್ದಿದ್ದು ಅದ್ಭುತ. ಈ ಅವಕಾಶಕ್ಕೆ ಧನ್ಯವಾದಗಳು ಎಂದಿದ್ದಾರೆ.

ರಜನಿಕಾಂತ್ ಮತ್ತು ಕಮಲಹಾಸನ್ ಅವರೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನೂ ಬಿಗ್ ಬಿ ಹಂಚಿಕೊಂಡಿದ್ದಾರೆ.

ಇಳಯರಾಜ ಅವರೊಂದಿಗೆ ಹಲವಾರು ಸಿನೆಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಕಮಲಹಾಸನ್ "ರಾಜ ನನ್ನ ಜೀವನದ ಭಾಗವಾಗಿಬಿಟ್ಟಿದ್ದಾರೆ. ಇಂದು ಅವರನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಿತು. ಅವರು ಸ್ವಲ್ಪ ಸಂಕೋಚದ ಸ್ವಭಾವದವರು. ಅವರು ೧೦೦೦ ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಾರೆ ಎಂದು ನನಗೆ ಗೊತ್ತಿತ್ತು, ಅವರ ಸಂಗೀತ ನಿರ್ದೇಶನದ ೭೮೬ ನೆ ಚಲನಚಿತ್ರದಲ್ಲಿ ನಾನು ನಟಿಸಿದ್ದೆ ಎಂಬುದು ಸಂತಸದ ಸಂಗತಿ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT