ಸಿನಿಮಾ ಸುದ್ದಿ

ಚಂದ್ರು ಆಡಿಯೋಗೆ ಆಂಧ್ರ ರೆಡಿ

Srinivasamurthy VN

ನಿರ್ದೇಶಕ ಆರ್. ಚಂದ್ರು ತಮ್ಮ ರಾಜ್ಯಪ್ರಶಸ್ತಿ ವಿಜೇತ ಚಾರ್ ಮಿನಾರ್ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡುತ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಚಾರ್‍ಮಿನಾರ್ ಚಿತ್ರಕ್ಕೆ ಪ್ರಶಸ್ತಿ ಬಂದಿರುವ ಸಂತಸಕ್ಕೆ ಅವರು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಹೊತ್ತಲ್ಲಿ ಇದು ಇನ್ನೊಂದು ಸುದ್ದಿ. ಅವರ "ಕೃಷ್ಣಮ್ಮ ಕಲಿಪಿಂದಿ ಇದ್ದರನು" ಚಿತ್ರದ ಆಡಿಯೋ ಬಿಡುಗಡೆ ಸಮಯ ಇದು.

ಹೌದು ತಮ್ಮ ಮೊದಲ ತೆಲುಗು ಚಿತ್ರದ ಆಡಿಯೋ ಬಿಡುಗಡೆಯನ್ನು ಅದ್ದೂರಿಯಾಗಿ ಮಾಡಲು ಆರ್ ಚಂದ್ರು ಸ್ಕೆಚ್ ಹಾಕಿದ್ದಾರೆ. ಇದೇ ತಿಂಗಳ 26ರಂದು ಅದಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ತಮ್ಮ ಚಿತ್ರದ ಆಡಿಯೋ ಬಿಡುಗಡೆಗೆ ಚಂದ್ರು ಆರಿಸಿಕೊಂಡಿರುವುದು ಆಂಧ್ರದ ರಾಜಧಾನಿ ವಿಜಯವಾಡವನ್ನು. ವಿಶೇಷ ಎಂದರೆ ಅಲ್ಲಿನ ಪ್ರಮುಖ ಸೂಪರ್‍ಸ್ಟಾರ್ ಗಳು ಈ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬುದು. ಈಗಾಗಲೇ ವಿಕ್ಟರಿ ವೆಂಕಟೇಶ್ ಈ ಕಾರ್ಯಕ್ರಮಕ್ಕೆ ಬರುವುದು ಕನ್ ಫರ್ಮ್ ಆಗಿದೆ. ಉಳಿದಂತೆ ಇನ್ಯಾರು ಬರುತ್ತಾರೆ ಎಂಬ ಕುತೂಹಲಕ್ಕೆ ಅಂದಿನ ಕಾರ್ಯಕ್ರಮದಲ್ಲೇ ಉತ್ತರ ಸಿಗಲಿದೆಯಂತೆ.

ಅಂತೂ ಒಬ್ಬ ನಿರ್ದೇಶಕರಾಗಿ ಕನ್ನಡ ನಾಡಿನ ಗಡಿ ದಾಡಿದ ಚಂದ್ರು ಇನ್ನೇನು ತಮ್ಮ ಚಿತ್ರದ ಬಿಡುಗಡೆಯ ಗಡಿಯಲ್ಲಿದ್ದಾರೆ. ಅದರ ಕೊನೆಯ ಅಂಗವಾಗಿ ಈ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಒಂದೇ ಸಿನಿಮಾಕ್ಕೆ ಆಂಧ್ರದಲ್ಲಿ ಫೆಮಿಲಿಯಿರ್ ಹೆಸರು ಎನಿಸಿಕೊಂಡಿರುವ ಆರ್. ಚಂದ್ರು ಅಲ್ಲಿ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಈ ತೆಲುಗು ಚಿತ್ರದ ಬಿಡುಗಡೆಯ ನಂತರ ಚಿತ್ರ ಸೂಪರ್ ಹಿಟ್ ಆದರೆ ಅದು ಇನ್ನಷ್ಟು ಹೆಚ್ಚಾಗಿ ಚಂದ್ರು ಅಲ್ಲೇ ತಳವೂರಿದರೂ ಅಚ್ಚರಿ ಇಲ್ಲ.?


SCROLL FOR NEXT