ಮಹೇಶ್ ಬಾಬು ಮತ್ತು ರಾಜಮೌಳಿ 
ಸಿನಿಮಾ ಸುದ್ದಿ

ಜೊತೆಗೂಡಲಿರುವ ರಾಜಮೌಳಿ ಮತ್ತು ಮಹೇಶ್ ಬಾಬು

ಭಾರತದ ಅತಿ ದೊಡ್ಡ ಬಜೆಟ್ ಸಿನೆಮಾಗಳಲ್ಲಿ ಒಂದಾದ 'ಬಾಹುಬಲಿ' ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ತೆಲಗು ಸೂಪರ್ ಸ್ಟಾರ್ ಮಹೇಶ್ ಬಾಬು

ಚೆನ್ನೈ: ಭಾರತದ ಅತಿ ದೊಡ್ಡ ಬಜೆಟ್ ಸಿನೆಮಾಗಳಲ್ಲಿ ಒಂದಾದ 'ಬಾಹುಬಲಿ' ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ತೆಲಗು ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗೂಡಿ ಸಿನೆಮಾವೊಂದನ್ನು ಮಾಡಲಿದ್ದಾರಂತೆ.

"ಕೆಲವು ವರ್ಷಗಳ ಹಿಂದೆಯೇ ಮಹೇಶ್ ಮತ್ತು ರಾಜಮೌಳಿ ಒಟ್ಟಿಗೆ ಸಿನೆಮಾ ಮಾಡಬೇಕಿತ್ತು ಆದರೆ ಅದು ತಡವಾಯಿತು. 'ಬಾಹುಬಲಿ' ಸಿನೆಮಾದ ಎರಡನೆ ಭಾಗ ಮುಂದಿನ ವರ್ಷ ಬಿಡುಗಡೆಯಾದ ನಂತರ ಇವರಿಬ್ಬರೂ  ಸಿನೆಮಾವೊಂದರಲ್ಲಿ ಕೆಲಸ ಮಾಡಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

೨೦೧೬ ರ ಕೊನೆಯ ಭಾಗದಲ್ಲಿ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತವೆ ಮೂಲಗಳು.

"ಭಾಹುಬಲಿಯ ಎರಡನೇ ಭಾಗದ ಉಳಿದ ಚಿತ್ರೀಕರಣವನ್ನು ರಾಜಮೌಳಿ ಸೆಪ್ಟಂಬರ್ ನಲ್ಲಿ ಪ್ರಾರಂಭಿಸಲಿದ್ದಾರಂತೆ. ಇದು ಗುಗಿದ ನಂತರ ಮಹೇಶ್ ಬಾಬು ಅವರ ನಟನೆಯ ಚಿತ್ರವನ್ನು ಕೈಗೆತ್ತುಕೊಳ್ಳಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಈ ಸಿನೆಮಾದ ನಿರ್ಮಾಪಕ ಕೆ ಎಲ್ ನಾರಾಯಣ.

ಈ ಮಧ್ಯೆ ಮಹೇಶ್ ಅವರು ಶ್ರೀಕಾಂತ್ ಅಡ್ಡಲಾ ಅವರ 'ಬ್ರಹ್ಮಮಹೋತ್ಸವಂ' ಮತ್ತು ಪೂರಿ ಜಗನ್ನಾಥ್ ಅವರ ಹೆಸರಿಡದ ಚಲನಚಿತ್ರದ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್