ಬೆಂಗಳೂರು: ನಿರ್ದೇಶಕನಾಗಿ ಭಡ್ತಿ ಹೊಂದಿರುವ ನೃತ್ಯ ನಿರ್ದೇಶಕ ಎ ಹರ್ಷ, 'ವಜ್ರಕಾಯ'ದ ಸಾಧಾರಣ ಯಶಸ್ಸಿನ ನಂತರ ಹೊಸ ಚಲನಚಿತ್ರವೊಂದಕ್ಕೆ ಹುರಿಗೊಳ್ಳುತ್ತಿದ್ದಾರೆ. ಮುಂದಿನ ವಾರ ತಮ್ಮ ಹೊಸ ಸಾಹಸ 'ಜೈ ಮಾರುತಿ ೮೦೦' ಸಿನೆಮಾ ಚಿತ್ರೀಕರಣ ಪ್ರಾರಂಭಿಸಲಿದ್ದಾರಂತೆ.
ಜಯಣ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಡಿ ನಿರ್ಮಿಸಲಾಗುತ್ತಿರುವ ಸಿನೆಮಾಗೆ ಹರ್ಷ ಅವರ ಆಯ್ಕೆ ಶರಣ್. "ಶರಣ್ ಅವರು ಈ ಸಿನೆಮಾಗಾಗಿ ಸಿಕ್ಸ್-ಪ್ಯಾಕ್ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ನಾನು ಕಮರ್ಷಿಯಲ್ ನಿರ್ದೇಶಕ ಮತ್ತು ನಮ್ಮ ಸಿನೆಮಾದಲ್ಲಿ ಹಾಸ್ಯ, ಭಾವನಾತ್ಮಕ ದೃಶ್ಯಗಳು ಮತ್ತು ಆಕ್ಷನ್ ಮಿಳಿತಗೊಂಡಿರುತ್ತದೆ. ಅವರ ದೇಹ ಸಿಕ್ಸ್-ಪ್ಯಾಕ್ ಆಗಿದೆ ಎಂದಾಕ್ಷಣ ಇದು ಆಕ್ಷನ್ ಸಿನೆಮಾ ಎಂದೇನಲ್ಲ. ಒಂದು ದೊಡ್ಡ ಆಕ್ಷನ್ ದೃಶ್ಯ ಇರುತ್ತದೆ" ಎನ್ನುತ್ತಾರೆ ನಿರ್ದೇಶಕ.
ಹರ್ಷ ಕ್ಲೈಮ್ಯಾಕ್ ಚಿತ್ರೀಕರಣವನ್ನು ಮೊದಲು ಪ್ರಾರಂಭಿಸಲಿದ್ದು, ರವಿವರ್ಮ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರಂತೆ.
ಸಾಮಾನ್ಯವಾಗಿ ಹರ್ಷ ಅವರ ಸಿನೆಮಾಗಳ ಶೀರ್ಷಿಕೆಗಳಲ್ಲಿ ಹನುಮಂತ ಪ್ರತ್ಯಕ್ಷರಾಗುತ್ತಾರೆ. ಹಾಗೆಯೇ ಅವರ ಸಿನೆಮಾ ದೃಶ್ಯಗಳಲ್ಲೂ. 'ನೋ ಲಾಜಿಕ್, ಒನ್ಲಿ ಮ್ಯಾಜಿಕ್' ಎಂಬ ಅಡಿ ಶೀರ್ಷಿಕೆಯಿರುವ ಈ ಸಿನೆಮಾದಲ್ಲಿ ಆಂಜನೇಯ ಹೇಗೆ ಕಾಣಿಸಿಕೊಳ್ಳುತ್ತಾನೋ ಕಾದು ನೋಡಬೇಕು!