ವಾಷಿಂಗ್ಟನ್: ಬರಾಕ್ ಒಬಾಮಾ ಅವರ ಲವ್‌ಸ್ಟೋರಿ ಆಧಾರಿತ ಸಿನಿಮಾ ಸೌತ್‌ಸೈಡ್ ವಿದ್ ಯೂ ತೆರೆಕಾಣಲು ಸಿದ್ಧವಾಗಿದೆ.
ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನ ಮಿಶೆಲ್ ಜತೆಗಿನ ಪ್ರಣಯ ಈ ಚಿತ್ರದ ಕಥಾವಸ್ತು.
ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಒಬಾಮ ತಮ್ಮ ಪ್ರಣಯ ಕಥೆಯನ್ನು ಹೇಳಿದ್ದರು. 1989ರಲ್ಲಿ ಮಿಶೆಲ್ ಜತೆ ಸ್ಪೈಕ್ ಲೀ ಅವರ ಡು ದ ರೈಟ್ ಥಿಂಗ್ ಸಿನಿಮಾ ನೋಡಿದ್ದು, ಬಾಸ್ಕಿನ್ ರೋಬಿನ್ಸ್ ಹೊರಗೆ ಮಿಶೆಲ್‌ಗೆ ಕಿಸ್ ಕೊಟ್ಟಿದ್ದು ಎಲ್ಲವನ್ನೂ ಒಬಾಮಾ ಹೇಳಿಕೊಂಡಿದ್ದರು.
ಸೌತ್‌ಸೈಡ್ ವಿದ್ ಯೂ ಸಿನಿಮಾದಲ್ಲಿ ಒಬಾಮ ಮತ್ತು ಮಿಶೆಲ್ ಕಥಾಪಾತ್ರಗಳು ಮೊದಲ ಬಾರಿ ಭೇಟಿಯಾಗುವುದು, ಅಲ್ಲಿಂದ ಅವರ ಪ್ರೇಮಕಥೆ ಶುರುವಾಗುವ ಮೂಲಕ ಕಥೆ ಆರಂಭವಾಗುತ್ತದೆ.
ರಿಚಾರ್ಡ್ ತಾನ್ನೆ ನಿರ್ದೇಶಿಸಿರುವ ಸೌತ್‌ಸೈಡ್ ವಿದ್ ಯೂ ಸಿನಿಮಾದಲ್ಲಿ ಪಾರ್ಕರ್ ಸಾಯರ್ಸ್ ಮತ್ತು ಟೀಕಾ ಸಂಪ್ಟರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗುವ ದಿನಾಂಕದ ಬಗ್ಗೆ ನಿರ್ದೇಶಕರು ಯಾವುದೇ ಸುಳಿವು ನೀಡಿಲ್ಲ.