ಗಿರೀಶ್ ಕಾಸರವಳ್ಳಿ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಜು.25 ರಿಂದ ಭಾರತೀಯ ವಿದ್ಯಾಭವನದದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರಗಳ ಚಿತ್ರೋತ್ಸವ

ಗಿರೀಶ್ ಕಾಸರವಳ್ಳಿ ಅವರ ಚಿತ್ರೋತ್ಸವವನ್ನು ಜು. 25 ರಿಂದ 29 ರವರೆಗೆ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು: ಗಿರೀಶ್ ಕಾಸರವಳ್ಳಿ ಅವರ 10 ಚಿತ್ರಗಳ ಚಿತ್ರೋತ್ಸವವನ್ನು ಜು. 25 ರಿಂದ 29 ರವರೆಗೆ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಚಿತ್ರೋತ್ಸವ ಉದ್ಘಾಟನೆ ದಿನ ಬೆಳಿಗ್ಗೆ 10 :30 ರಿಂದ ರಾತ್ರಿ 8 ಗಂಟೆ ವರೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿ ಟಾಕೀಸ್ ನಾಯಿ ನೆರಳು, ಮತ್ತು ಕ್ರೌರ್ಯ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಜು.26 ರ ಬೆಳಿಗ್ಗೆ 10 :30 ರಿಂದ ರಾತ್ರಿ 8ರವರೆಗೆ ತಾಯಿ ಸಾಹೇಬ, ಘಟಶ್ರಾದ್ಧ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಅಂತೆಯೇ ಜು.27 ರ ಮಧ್ಯಾಹ್ನ 3.30 ರಿಂದ ರಾತ್ರಿ 8ರವರೆಗೆ ತಬರನ ಕಥೆ ಮತ್ತು ದ್ವೀಪ ಚಲನಚಿತ್ರ, ಜು.28 ರಂದು ಕನಸೆಂಬ ಕುದುರೆಯನೇರಿ, ಹಸೀನಾ ಹಾಗೂ ಜು.29 ರಂದು ಅದೂರು ಗೋಪಾಲಕೃಷ್ಣ ಚಲನಚಿತ್ರಗಳು ಪ್ರದರ್ಶನವಾಗಲಿವೆ. ಇದರೊಂದಿಗೆ ಪ್ರತಿದಿನ ಚಲನಚಿತ್ರ ತಜ್ಞರು ಮತ್ತು ವಿಮರ್ಶಕರು ಒಳಗೊಂಡಂತೆ ಚರ್ಚೆ ಸಂವಾದ ನಡೆಯಲಿದೆ.

ಚಲನಚಿತ್ರ ಪ್ರದರ್ಶನದೊಂದಿಗೆ ಪ್ರತಿದಿನ ಚಲನಚಿತ್ರ ತಜ್ಞರು ಮತ್ತು ವಿಮರ್ಶಕರು ಪಾಲ್ಗೊಳ್ಳುವ ಚರ್ಚೆ-ಸಂವಾದ ನಡೆಯುತ್ತವೆ. ಕನ್ನಡ ಚಿತ್ರರಂಗದ ಪ್ರತಿಭಾವಂತರ ಚಿತ್ರೋತ್ಸವ ಏರ್ಪಡಿಸುವ ನಡೆಯನ್ನು ಭಾರತೀಯ ವಿದ್ಯಾಭವನ ಕಳೆದವರ್ಷ ಟಿ.ಎಸ್. ನಾಗಾಭರಣರ 14 ವೈವಿಧ್ಯಮಯ ಚಿತ್ರಗಳ ಚಿತ್ರೋತ್ಸವದೊಂದಿಗೆ ಪ್ರಾರಂಭಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT