ಸಿನಿಮಾ ಸುದ್ದಿ

ಡಿಸೆಂಬರ್-1 ಬಿಡುಗಡೆ ಮಾಡದಂತೆ ನೂರಾರು ಬೆದರಿಕೆ ಕರೆಗಳು!: ಶೇಷಾದ್ರಿ

ಬೆಂಗಳೂರು: ಎಚ್‍ಐವಿ ಪೀಡಿತರನ್ನು ಸಮಾಜ ಕೀಳಾಗಿ ನೋಡುತ್ತದೆ. ಆದರೆ ಅದೇ ವಿಷಯವನ್ನು ಕತೆಯಾಗಿ ರೂಪಿಸಿ ಸಿನೆಮಾ ನಿರ್ಮಿಸಿದಾಗ ನೂರಾರು ಬೆದರಿಕೆ ಕರೆಗಳನ್ನು
ಎದುರಿಸಬೇಕಾಯಿತು....

ರಾಜ್ಯ ಚಲನಚಿತ್ರ ಅಕಾಡೆಮಿಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶನಿವಾರ ಆಯೋಜಿಸಿದ್ದ `ಬೆಳ್ಳಿ ಸಿನೆಮಾ ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ `ಡಿಸೆಂಬರ್-1' ಚಿತ್ರ ಕುರಿತು ನಿರ್ದೇಶಕ ಪಿ.ಶೇಷಾದ್ರಿ ತಮ್ಮ ಅನುಭವ ಹಂಚಿಕೊಳ್ಳುವ ವೇಳೆ ಈ ವಿಷಯ ಬಹಿರಂಗಪಡಿಸಿದರು.

ರಾಜ್ಯದ ಮುಖ್ಯಮಂತ್ರಿಯೊಬ್ಬರಿಂದ ಆರಂಭವಾದ `ಗ್ರಾಮ ವಾಸ್ತವ್ಯ' ಒಂದು ದಂಪತಿಯ `ವಾಸ್ತವ್ಯ'ವನ್ನೇ ನಾಶಮಾಡಿತು. ಬಾಗಲಕೋಟೆಯ ಗ್ರಾಮವೊಂದರಲ್ಲಿ ಎಚ್‍ಐವಿ ಪೀಡಿತರಾದ ಕುಟುಂಬ ಗ್ರಾಮ ವಾಸ್ತವ್ಯದಿಂದ ಅನುಭವಿಸಬೇಕಾದ ಪರಿಸ್ಥಿತಿ ಪತ್ರಿಕೆಂಯೊಂದರಲ್ಲಿ ವರದಿಯಾಗಿತ್ತು. ಇದನ್ನೇ ಆಧರಿಸಿ ಕಲ್ಪಿತ ಕತೆಂಯೊಂದನ್ನು ಹೆಣೆದು `ಡಿಸೆಂಬರ್-1' ಸಿನೆಮಾ ಮಾಡಿದೆ. ಆದರೆ ಚಿತ್ರದ ಬಿಡುಗಡೆ ವೇಳೆ ನೂರಾರು ಬೆದರಿಕೆಯ ಕರೆ ಎದುರಿಸಬೇಕಾಗಿ ಬಂತು. ಆದರೆ ಗ್ರಾಮ ವಾಸ್ತವ್ಯದಿಂದ ನೋವು ಅನುಭವಿಸಿದ ಕುಟುಂಬ ಹಾಗೂ ಚಿತ್ರದಲ್ಲಿನ ಪಾತ್ರಗಳಿಗೆ ಯಾವುದೇ ಸಂಬಂಧವಿಲ್ಲ. ಚಿತ್ರದಲ್ಲಿ ಕಲ್ಪಿತ ಕತೆಂಯೊಂದನ್ನು ಹೆಣೆಯಲಾಗಿದೆ. ನೊಂದವರನ್ನು ನಿಭಾಯಿಸುವಲ್ಲಿ ಸರ್ಕಾರ ಹಾಗೂ ಮಾಧ್ಯಮದ ಪಾತ್ರದ ಬಗ್ಗೆ ಇದು ಬೆಳಕು ಚೆಲ್ಲುತ್ತದೆ ಎಂದರು.

SCROLL FOR NEXT