ನಟ ಪುನೀತ್-ಶಿವರಾಜ್ ಕುಮಾರ್ ಸಹೋದರರು 
ಸಿನಿಮಾ ಸುದ್ದಿ

ಇದು ಅಧಿಕೃತ; ರವಿವರ್ಮ ಚಿತ್ರದಲ್ಲಿ ಪವರ್ ಸ್ಟಾರ್-ಹ್ಯಾಟ್ರಿಕ್ ಹೀರೋ ಜೋಡಿ

ಇಬ್ಬರು ಖ್ಯಾತ ನಟರೂ ಅದರಲ್ಲೂ ಅವರಿಬ್ಬರೂ ರಕ್ತ ಸಂಬಂಧಿಗಳಾಗಿರುವಾಗ ಅವರನ್ನು ಒಂದೇ ಸಿನೆಮಾದಲ್ಲಿ ಒಟ್ಟಿಗೆ ನಟಿಸುವಂತೆ ಒಪ್ಪಿಸುವುದು ಧೈರ್ಯವನ್ನು ಬೇಡುತ್ತದೆ.

ಬೆಂಗಳೂರು: ಇಬ್ಬರು ಖ್ಯಾತ ನಟರೂ ಅದರಲ್ಲೂ ಅವರಿಬ್ಬರೂ ರಕ್ತ ಸಂಬಂಧಿಗಳಾಗಿರುವಾಗ ಅವರನ್ನು ಒಂದೇ ಸಿನೆಮಾದಲ್ಲಿ ಒಟ್ಟಿಗೆ ನಟಿಸುವಂತೆ ಒಪ್ಪಿಸುವುದು ಧೈರ್ಯವನ್ನು ಬೇಡುತ್ತದೆ. ದೈರ್ಯವಷ್ಟೇ ಸಾಲದು ಪ್ರೇಕ್ಷಕ ಒಪ್ಪಿಕೊಳ್ಳುವಂತಹ ಅತ್ಯುತ್ತಮ ಕಥೆಯನ್ನು ಬೇಡುತ್ತದೆ. ಈ ದೈರ್ಯಕ್ಕೆ ಮುಂದಾಗಿರುವವರು ನಿರ್ದೇಶಕ ರವಿವರ್ಮ. ಇವರ ಮುಂದಿನ ಸಿನೆಮಾದ ನಾಯಕ ನಟರು ಅಣ್ಣ ಶಿವರಾಜ್ ಕುಮಾರ್ ಮತ್ತು ತಮ್ಮ ಪುನೀತ್ ರಾಜಕುಮಾರ್.

ನಿರ್ಮಾಪಕ ಜಯಣ್ಣ ಈ ವಿಷಯವನ್ನು ಧೃಢೀಕರಿಸಿದ್ದು "ನಾನು ಈ ಸಿನೆಮಾವನ್ನು ಜಯಣ್ಣ ಕಂಬೈನ್ಸ್ ಬ್ಯಾನರಿನಡಿ ನಿರ್ಮಿಸುತ್ತಿದ್ದೇನೆ. ಈ ಸಿನೆಮಾ ಇನ್ನು ಸ್ಕ್ರಿಪ್ಟ್ ಹಂತದಲ್ಲಿದೆ, ಚಿತ್ರೀಕರಣ ಜನವರಿ ೨೦೧೬ ರಲ್ಲಿ ಪ್ರಾರಂಭವಾಗಲಿದೆ. ಸದ್ಯಕ್ಕೆ ನಾನು ಜೈ ಮಾರುತಿ ೮೦೦, ಯೋಗಿ ಜಿ ರಾಜ್ ಅವರ 'ಬಂಗಾರ, ಸನ್ ಆಫ್ ಬಂಗಾರದ ಮನುಷ್ಯ' ಸಿನೆಮಾಗಳಲ್ಲಿ ನಿರತನಾಗಿರುವುದರಿಂದ ಈ ವಿಷಯದ ಬಗ್ಗೆ ಹೆಚ್ಚೇನೂ ಹೇಳಿರಲಿಲ್ಲ. ರವಿವರ್ಮ ಅವರ ಈ ಯೋಜನೆಯ ಬಗೆಗೆ ಹಲವಾರು ವದಂತಿಗಳಿವೆ. ಈಗ ನನ್ನ ಹೇಳಿಕೆ ಆ ವದಂತಿಗಳಿಗೆ ತಡೆ ಹಾಗುತ್ತದೆ" ಎನ್ನುತ್ತಾರೆ.

೩೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದು ಎಂದು ವದಂತಿಗಳು ಹಬ್ಬಿದ್ದು, ಪುನೀತ್ ಅವರ 'ರಣವಿಕ್ರಮ' ನಿರ್ದೇಶಿಸಿದ್ದ ಪವನ್ ಒಡೆಯರ್ ಸಿನೆಮಾಗೆ ಸಂಭಾಷಣೆ ಬರೆಯಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?