ನಟ ನೀನಾಸಂ ಸತೀಶ್ ಮತ್ತು ಅವರ ಪತ್ನಿ ಸುಪ್ರೀತಾ 
ಸಿನಿಮಾ ಸುದ್ದಿ

'ರಾಕೆಟ್' ಉಡಾವಣೆಗೂ ಮುಂಚೆಯೇ ಕ್ವಾಟ್ಲೆ ಸತೀಶ್ ಗೆ ಸಿಹಿ ಸುದ್ದಿ

'ಲವ್ ಇನ್ ಮಂಡ್ಯ' ಖ್ಯಾತಿಯ ನಟ ಸತೀಶ್ ಅವರು ಸಂಭ್ರಮದಲ್ಲಿ ತೇಲಿಹೋಗಿದ್ದಾರೆ. ಎಲ್ಲ ಇದು ಅವರ ಮುಂದಿನ ಸಿನೆಮಾ 'ರಾಕೆಟ್' ಗೆ ಸಂಬಂಧಿಸಿದ್ದಲ್ಲ.

ಬೆಂಗಳೂರು: 'ಲವ್ ಇನ್ ಮಂಡ್ಯ' ಖ್ಯಾತಿಯ ನಟ ಸತೀಶ್ ಅವರು ಸಂಭ್ರಮದಲ್ಲಿ ತೇಲಿಹೋಗಿದ್ದಾರೆ. ಎಲ್ಲ ಇದು ಅವರ ಮುಂದಿನ ಸಿನೆಮಾ 'ರಾಕೆಟ್' ಗೆ ಸಂಬಂಧಿಸಿದ್ದಲ್ಲ. ಬದಲಾಗಿ ಜನಕ್ಕೆ ಹೆಚ್ಚು ಪರಿಚಿತವಲ್ಲದ ಒಂದು ವಿಷಯ. ಸತೀಶ್ ಮತ್ತು ಅವರ ಪತ್ನಿ ಸುಪ್ರೀತಾ ಅವರಿಗೆ ಹೆಣ್ಣುಮಗುವೊಂದರ ಆಗಮನವಾಗಿರುವುದು!

ನೀವು ಮದುವೆ ಆಗಿರುವ ಸುಳಿವೇ ನೀಡದೆ ಗುಟ್ಟಾಗಿಟ್ಟಿದ್ದಿರೆಲ್ಲಾ ಈ ವಿಷಯವನ್ನು ಎಂದು ಸತೀಶ್ ಅವರಿಗೆ ಕೇಳಿದರೆ ಅವರು ಜೋರಾಗಿ ನಕ್ಕಿ "ನಾನು ಬ್ರಹ್ಮಚಾರಿಯೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಈಗೆಲ್ಲವೂ ತಿಳಿದು ಹೋಯಿತು" ಎಂದು ಹಾಸ್ಯ ಮಾಡುತ್ತಾರೆ.

ತಮ್ಮ ತಾಯಿಗೆ ಹೆಚ್ಚು ವಯಸ್ಸಾಗಿದ್ದರಿಂದ ಬೇಗನೆ ಮದುವೆಯಾಗಬೇಕಾಗಿ ಬಂತು ಎನ್ನುವ ಸತೀಶ್ "ನಾನು ಸ್ವಲ ಸಂಕೋಚದ ಸ್ವಭಾವದವ. ಜನರೊಂದಿಗೆ ಬೆರೆಯುವುದು ಕಡಿಮೆ. ನನ್ನ ಖಾಸಗಿ ಸಂಭ್ರಮಗಳನ್ನು ಸಾರ್ವಜನಿಕ ಮಾಡುವುದಿಲ್ಲ, ನನ್ನ ಪತ್ನಿಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಇಷ್ಟವಿಲ್ಲ" ಎನ್ನುತ್ತಾರೆ.

ಸದ್ಯಕ್ಕೆ ಬಾದಾಮಿಯಲ್ಲಿ 'ರಾಕೆಟ್' ಚಿತ್ರೀಕರಣದಲ್ಲಿ ನಿರತನಾಗಿರುವುದರಿಂದ ಮಗಳ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT