ನಟ ಡಾ. ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಸುದೀಪ್ ಜೊತೆ ಖಂಡಿತವಾಗಿ ನಟಿಸುತ್ತೇನೆ: ಶಿವಣ್ಣ

ಸುದೀಪ್ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ನಟ ಡಾ. ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದರು ಈ ಇಬ್ಬರೂ ನಾಯಕ ನಟರ ಅಭಿಮಾನಿಗಳು

ಬೆಂಗಳೂರು: ಸುದೀಪ್ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ನಟ ಡಾ. ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದರು ಈ ಇಬ್ಬರೂ ನಾಯಕ ನಟರ ಅಭಿಮಾನಿಗಳು ಮುಸುಕಿನ ಗುದ್ದಾಟದಲ್ಲೇ ನಿರತರಾಗಿದ್ದಾರೆ. ಸುದೀಪ್ ನಟನೆಯ ರನ್ನ ಬಿಡುಗಡೆಯಾದ ಒಂದು ವಾರದ ನಂತರವಷ್ಟೇ ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಬಿಡುಗಡೆಯಾಗುತ್ತಿರುವುದು ಈ ಗುದ್ದಾಟಕ್ಕೆ ಕಾರಣ.

ವಜ್ರಕಾರ ಸಿನೆಮಾದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್ "ನಾವಿಬ್ಬರೂ ಒಂದು ಸಿನೆಮಾದಲ್ಲಿ ಒಟ್ಟಿಗೆ ನಟಿಸಿದರೆ ನಬ್ಬಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗೆ ತೆರೆ ಬೀಳುತ್ತದೆ. ನಾನು ಸುದೀಪ್ ಜೊತೆ ಖಂಡಿತಾ ಒಂದು ಸಿನೆಮಾ ಮಾಡುತ್ತೇನೆ. ಶಾಂತಿ ನಿವಾಸದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದೆ. ಅಲ್ಲದೆ ನಮ್ಮಿಬ್ಬರಿಗೂ ಒಟ್ಟಿಗೆ ನಟಿಸುವ ಯೋಚನೆಯಿತ್ತು. ಆದರೆ ಪೂರ್ವ ನಿಯೋಜಿತ ಕೆಲಸಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ನಟ-ನಿರ್ದೇಶಕನ ಜೊತೆ ಒಂದು ಸಿನೆಮಾ ಮಾಡಲೇಬೇಕು ಎಂದು ನಿಶ್ಚಯಿಸಿದ್ದೇನೆ ಏಕೆಂದರೆ ಇದು ಎಲ್ಲ ಸಂಶಯಗಳನ್ನು ಬಗೆಹರಿಸುತ್ತದೆ ಹಾಗು ಇದರಿಂದ ಕನ್ನಡ ಚಿತ್ರೋದ್ಯಮಕ್ಕೆ ಒಳಿತಾಗುತ್ತದೆ" ಎಂದಿದ್ದರೆ.

ಮಂಡ್ಯಾದಲ್ಲಿ ಸುದೀಪ್ ಜೊತೆಗೆ ತಾವು ನಡೆಸಿದ ಮಾತುಕತೆಯನ್ನು ನೆನಪಿಸಿಕೊಂಡ ಶಿವಣ್ಣ "ಅವರಿಗೆ ನನ್ನ ಪತ್ನಿ ಗೀತಾ ಎಂದರೆ ಬಹಳ ಗೌರವ. ನನ್ನ ಪತ್ನಿ ಮಾಡುವ ಅಕ್ಕಿ ರೊಟ್ಟಿ ಅವರಿಗೆ ಬಹಳ ಇಷ್ಟ. 'ಈಗ' ಸಿನೆಮಾದಲ್ಲಿ ಸುದೀಪ್ ಅವರ ನಟನೆಯ ಬಗ್ಗೆ ನಾಗಾರ್ಜುನ ಪ್ರಶಂಸೆ ವ್ಯಕ್ತಪಡಿಸಿದಾಗ, ಮತ್ತೊಂದು ಚಿತ್ರರಂಗದ ತಾರೆ ಸುದೀಪ್ ಅವರನ್ನು ಹೊಗಳಿದ್ದಕ್ಕೆ ನನಗೆ ಭಾರಿ ಸಂತಸವಾಯಿತು ಎಂದು ಅವರಿಗೆ ತಿಳಿಸಿದ್ದೆ".

ಪುನೀತ್ ಅಭಿನಯದ 'ರಣವಿಕ್ರಮ' ಪ್ರದರ್ಶನದ ವೇಳೆ 'ರನ್ನ' ಸಿನೆಮಾದ ಟ್ರೇಲರ್ ಹಾಕಿದ್ದಕ್ಕೆ ಅಭಿಮಾನಿಗಳು ಗಲಭೆಯೆಬ್ಬಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಶಿವಣ್ಣ "ನಾನು ಈ ವಿಷಯವನ್ನು ಕೇಳಲ್ಪಟ್ಟೆ. ನಾನು ಇವುಗಳನ್ನು ಉತ್ತೇಜಿಸುವುದಿಲ್ಲ. ನಾನು ಅಭಿಮಾನಿಗಳನ್ನು ಗೌರವಿಸುತ್ತೇನೆ ಮತ್ತು ಇದನ್ನೇ ಅವರಿಂದ ಬಯಸುತ್ತೇನೆ. ನನಗೆ ರಾಜಕುಮಾರ್ ಎಂಬ ಎರಡನೇ ಹೆಸರಿಗೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರೋದ್ಯಮಕ್ಕೆ ರಾಷ್ಟ್ರೀಯ ಮನ್ನಣೆ ಒದಗಿಸಿ ಗೌರವ ತಂದುಕೊಟ್ಟದ್ದು ಅವರು. ಅದನ್ನು ನಾವು ಉಳಿಸಬೇಕು. ಈ ಘಟನೆಯ ಕಾರಣಕರ್ತರು ಹಾಗೆ ಮಾಡಬಾರದಾಗಿತ್ತು" ಎಂದಿದ್ದಾರೆ.

ಚಿತ್ರೋದ್ಯಮದ ಏಳಿಗೆಗೆ ಹಾಗು ಒಗ್ಗಟ್ಟಿಗೆ ಎಲ್ಲರೂ ಶ್ರಮಿಸಬೇಕು ಎಂದಿರುವ ಅವರು "ಈ ರೀತಿಯ ವಿವಾದಗಳು ಮತ್ತು ಗಲಭೆಗಳಿಗೆ ಸಾಮಾಜಿಕ ಮಾಧ್ಯಮವೇ ಕಾರಣ ಎಂದೆನಿಸುತ್ತದೆ ನನಗೆ. ಏಳು ವರ್ಷ ಹಿಂದಕ್ಕೆ ಹೋದರೆ ಜನರಿಗೆ ಸಿನೆಮಾದ ಗೆಲುವು ಮತ್ತು ಸೋಲಿನ ಬಗ್ಗೆ ತಿಳಿದುಕೊಳ್ಳಲಷ್ಟೇ ಆಸಕ್ತಿಯಿತ್ತು. ಇಂದು ಟ್ವಿಟ್ಟರ್, ಫೇಸ್ ಬುಕ್ ಎಲ್ಲಾ ತೆರೆದ ಪುಸ್ತಕಗಳಾಗಿವೆ. ಈ ಹೊಸ ತಂತ್ರಜ್ಞಾನ ಸಂಬಂಧಗಳನ್ನು ಒಡೆಯದೆ ಒಳ್ಳೆಯದಕ್ಕಾಗಿ ಬಳಕೆಯಾಗಲಿ ಎಂದು ಭರವಸೆ ಇಡುತ್ತೇನೆ" ಎಂದಿದ್ದಾರೆ ಶಿವಣ್ಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT