ರನ್ನ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ನಾನು ಜೈಲಿಗೆ ಹೋಗಿಲ್ಲ ಎಂದ 'ರನ್ನ' ನಿರ್ಮಾಪಕ ಚಂದ್ರಶೇಖರ್

ರನ್ನ ಚಿತ್ರದ ಸಲುವಾಗಿ ವಿತರಕರೊಡನೆ ನನಗೆ ತಕರಾರಿದೆ. ಜೊತೆಗೆ ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ಆದರೆ ಪತ್ರಿಕೆಯಲ್ಲಿ ವರದಿಯಾದಂತೆ ನಾನು ಜೈಲಿಗೆ ಹೋಗಿಲ್ಲ.

ಕಳೆದ ಕೆಲವು ದಿನಗಳಿಂದ ರನ್ನ ಚಿತ್ರದ ಹಂಚಿಕೆ ಸಂಬಂಧ ಎದ್ದಿದ್ದ ಗೊಂದಲಗಳಿಗೆ ನಿರ್ಮಾಪಕ ನಿಮಿಷಾಂಭ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ರನ್ನ ಚಿತ್ರದ ಸಲುವಾಗಿ ವಿತರಕರೊಡನೆ ನನಗೆ ತಕರಾರಿದೆ. ಜೊತೆಗೆ ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ಆದರೆ ಪತ್ರಿಕೆಯಲ್ಲಿ ವರದಿಯಾದಂತೆ ನಾನು ಜೈಲಿಗೆ ಹೋಗಿಲ್ಲ.  ನನ್ನ ಮೇಲಿದ್ದ ಎಲ್ಲಾ ಕೇಸುಗಳಲ್ಲಿಯೂ ನಾನು ಖುಲಾಸೆ ಆಗಿದ್ದೇನೆ. ಇದು ರನ್ನ ಚಿತ್ರದ ನಿರ್ಮಾಪಕ  ಚಂದ್ರಶೇಖರ್ ಜೈಲಿಗೆ ಹೋಗಿದ್ದರು ಎಂದು ಪ್ರಕಟವಾದ ಸುದ್ದಿಗೆ ಅವರು ಕೊಟ್ಟಿರುವ ಸ್ಪಷ್ಟನೆ.
ಹಾಗಾಗಿ ಅವರು ಜೈಲಿಗೆ ಹೋಗಿದ್ದರು ಎಂಬ ಸುದ್ದಿ ನೋಡಿ ಅಸಮಾಧಾನಗೊಂಡಿದ್ದ ನಿರ್ಮಾಪಕ ಚಂದ್ರಶೇಖರ್ ಅವರು ಹಲವು ದಿನಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಹೀಗಿರುವಾಗ ಗಾಯದ ಮೇಲೆ ಬರೆ ಎಳೆಯುವುದು ಯಾವ ನ್ಯಾಯ ಎಂಬುದು ಅವರ ಪ್ರಶ್ನೆ. ಕೆಲವು ಕೇಸುಗಳ ವಿಚಾರದಲ್ಲಿ ಅವರು ಬಸವೇಶ್ವರ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಕೆಲವು ನಿಮಿಷಗಳವರೆಗೆ ಇದ್ದುದ್ದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?