ಲಾಸ್ ಏಂಜಲೀಸ್: ಜಾಗತಿಕವಾಗಿ ಗಲ್ಲಾಪೆಟ್ಟಿಯಲ್ಲಿ ೧ ಬಿಲಿಯನ್ ಡಾಲರ್ ಗಳನ್ನು ಅತಿ ವೇಗವಾಗಿ ಗಳಿಸುವ ಸಿನೆಮಾ 'ಜುರಾಸಿಕ್ ವರ್ಲ್ಡ್' ಆಗಲಿದೆ. ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನೆಮಾ ಬಿಡುಗಡೆಯ ವಾರವೇ ಅತಿ ಹೆಚ್ಚಿನ ಗಳಿಕೆ ಕಂಡಿತ್ತು.
ಕ್ರಿಸ್ ಪ್ರ್ಯಾಟ್, ಬ್ರೈಸ್ ದಲ್ಲಾ ಹಾವರ್ಡ್, ಇರ್ಫಾನ್ ಖಾನ್ ನಟನೆಯ ಬಿಡುಗಡೆಯ ೧೩ ದಿನಗಳಲ್ಲೇ ಈ ದಾಖಲೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.
ಈ ಹಿಂದಿನ ದಾಖಲೆ ಯೂನಿವರ್ಸಲ್ ಸಿನೆಮಾ 'ಫ್ಯೂರಿಯಸ್ ೭'ದ್ದೆ ಆಗಿದೆ. ಆ ಆಕ್ಷನ್ ಸಿನೆಮಾ ಏಪ್ರಿಲ್ ನಲ್ಲಿ ಬಿಡುಗಡೆ ಕಂಡು ೧೭ ದಿನಗಳಲ್ಲಿ ೧ ಬಿಲಿಯನ್ ಡಾಲರ್ ಬಾಚಿತ್ತು.
ಇದೇ ನಿರ್ಮಾಣ ಸಂಸ್ಥೆಯ ಫೆಬ್ರವರಿಯಲ್ಲಿ ಬಿಡುಗಡೆ ಕಂಡಿದ್ದ 'ಫಿಫ್ಟಿ ಶೇಡ್ಸ್ ಆಫ್ ಗ್ರೆ' ಕೂಡ ಒಳ್ಳೆಯ ಹಣ ಗಳಿಸಿತ್ತು. ಬೇಸಿಗೆಯಲ್ಲಿ ಅನಿಮೇಶನ್ ಸಿನೆಮಾ 'ಮಿನಿಯನ್ಸ್' ಮತ್ತು 'ಟೆಡ್-೨' ಬಿಡುಗಡೆಗೆ ಕಾಯುತ್ತಿವೆ.