ಎಬಿಸಿಡಿ-2 
ಸಿನಿಮಾ ಸುದ್ದಿ

ಒಂದೇ ವಾರದಲ್ಲಿ 100 ಕೋಟಿ ಗಳಿಸಿದ ಎಬಿಸಿಡಿ-2 ಚಿತ್ರ

ಎನಿಬಡಿ ಕ್ಯಾನ್ ಡಾನ್ಸ್-2 (ಎಬಿಸಿಡಿ-2 ) ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ದಾಖಲೆ ನಿರ್ಮಿಸಿದ್ದು, ಒಂದು ವಾರದ ಪ್ರದರ್ಶನದಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ.

ನವದೆಹಲಿ: ಎನಿಬಡಿ ಕ್ಯಾನ್ ಡಾನ್ಸ್-2  (ಎಬಿಸಿಡಿ-2 ) ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ದಾಖಲೆ ನಿರ್ಮಿಸಿದ್ದು, ಒಂದು ವಾರದ ಪ್ರದರ್ಶನದಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ.

ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ನಟಿಸಿರುವ ಚಿತ್ರ ಜನಪ್ರಿಯವಾಗಿದ್ದು ಕಳೆದ ವಾರವೇ 46 ಕೋಟಿರೂಪಾಯಿಗಳನ್ನು ಗಳಿಸಿತ್ತು. ನಿರೀಕ್ಷೆಗೂ ಮೀರಿ ರೆಮೋ ಡಿಸೋಜ ಅವರ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ದಾಖಲೆಯ 100 ಕೋಟಿ ಮೊತ್ತ ಗಳಿಸಿದೆ.

ಎಬಿಸಿಡಿ-2 100 ಸಂಗ್ರಹಿಸಿರುವುದನ್ನು ಸ್ಪಷ್ಟಪಡಿಸಿರುವ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್, ಚಿತ್ರ ತೆರೆಕಂಡದಿನದಿಂದಲೂ ದಾಖಲೆಯ ಸಂಗ್ರಹ ಮಾಡುತ್ತಿದೆ ಎಂದು ಹೇಳಿದ್ದಾರೆ. ತರಣ್ ಆದರ್ಶ್, ಟ್ವೀಟ್ ಪ್ರಕಾರ, ಎಬಿಸಿಡಿ ಚಿತ್ರ ಭಾರತದಲ್ಲಿ 92 .85 ಕೋಟಿ ಗಳಿಸಿದ್ದು, ಹೊರದೇಶಗಳಲ್ಲಿ 11 .45 ಕೋಟಿ ಗಳಿಸಿದೆಯಂತೆ.   

ಪ್ರಥಮ ವಾರದ ಗಳಿಕೆ ತನು ವೆಡ್ಸ್ ಮನು ರಿಟನ್ಸ್ ಚಿತ್ರಕ್ಕಿಂತಲೂ ಕಡಿಮೆಯಿತ್ತಾದರೂ, ನಂತರದ ದಿನಗಳಲ್ಲಿ ದಾಖಲೆಯತ್ತ ಸಾಗಿರುವುದು ಅಚ್ಚರಿಸಿದೆ. ಎಬಿಸಿಡಿ- 2 ,  2015 ರಲ್ಲಿ ಪ್ರಥಮ ವಾರ ಅತಿ ಹೆಚ್ಚು ಗಳಿಸಿರುವ ಚಿತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್, ಪರಸ್ಪರ ಆಲಿಂಗನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT