ಜಿಗರ್​ಥಂಡಾ 
ಸಿನಿಮಾ ಸುದ್ದಿ

'ಜಿಗರ್​ಥಂಡಾ' ರಿಮೇಕ್ ನಲ್ಲಿ ರಾಹುಲ್, ರವಿ ಶಂಕರ್

ವೀಕ್ಷಕರು ಮತ್ತು ವಿಮರ್ಶಕರ ಸಮ ಮೆಚ್ಚಿಗೆ ಪಡೆದ ತಮಿಳು ಭೂಗತ-ಸಂಗೀತ ಚಲನಚಿತ್ರ 'ಜಿಗರ್​ಥಂಡಾ' ಕನ್ನಡಕ್ಕೂ ಬರಲಿದೆ. ರಾಹುಲ್ ಮತ್ತು ರವಿ ಶಂಕರ್ ಮುಖ್ಯ

ಚೆನ್ನೈ: ವೀಕ್ಷಕರು ಮತ್ತು ವಿಮರ್ಶಕರ ಸಮ ಮೆಚ್ಚಿಗೆ ಪಡೆದ ತಮಿಳು ಭೂಗತ-ಸಂಗೀತ ಚಲನಚಿತ್ರ 'ಜಿಗರ್​ಥಂಡಾ' ಕನ್ನಡಕ್ಕೂ ಬರಲಿದೆ. ರಾಹುಲ್ ಮತ್ತು ರವಿ ಶಂಕರ್ ಮುಖ್ಯ ಪಾತ್ರಧಾರಿಗಳು. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನೆಮಾವನ್ನು ನಟ ಸುದೀಪ್ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

"ಮೂಲ ಸಿನೆಮಾದಲ್ಲಿ ಸಿದ್ದಾರ್ಥ್ ಪತ್ರವನ್ನು ರಾಹುಲ್ ಅವರೂ, ಬಾಬ್ಬಿ ಸಿಂಹ ಅವರ ಪಾತ್ರವನ್ನು ನಾನು ನಿರ್ವಹಿಸಲಿದ್ದೇವೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ" ಎಂದು ರವಿಶಂಕರ್ ತಿಳಿಸಿದ್ದಾರೆ.

ಮೂಲದಲ್ಲಿ ಲಕ್ಷ್ಮಿ ಮೆನನ್ ಮಾಡಿದ ಪಾತ್ರಕ್ಕೆ ಸಂಯುಕ್ತ ಹೊರನಾಡ್ ಆಯ್ಕೆಯಾಗಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರವಿಶಂಕರ್ "ನಾನು ಮೂಲ ಚಿತ್ರವನ್ನು ನೋಡಿದ್ದಾಗ ಸಿಂಹ ಅವರ ನಟನೆಯನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಅವರು ಆ ಪಾತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದರು. ನನ್ನ ನಟನಾ ಅನುಭವದೊಂದಿಗೆ ಈ ಪಾತ್ರಕ್ಕೆ ಹೊಸ ಆಯಾಮವನ್ನು ತರಲಿದ್ದೇನೆ" ಎನ್ನುತ್ತಾರೆ.

ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!