ಮುಂಬೈ: ಹಂದಿ ಜ್ವರದಿಂದ ಬಳಲುತ್ತ ಖಾಸಗಿ ಆಸ್ಪತ್ರೆ ಸೇರಿದ್ದ 'ಕೂಬ್ಸೂರತ್' ನಟಿ ಸೋನಮ್ ಕಪೂರ್ ಶನಿವಾರ ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ಅವರ ತಮ್ಮ ಪ್ರೀತಿಯ ಮನೆಗೆ ಹಿಂದಿರುಗಿದ್ದನ್ನು ಟ್ವೀಟ್ ಮಾಡಿದ್ದಾರೆ.
"ಬಿಡುಗಡೆ!!!!! ಮನೆ ಪ್ರೀತಿಯ ಮನೆ!!" ಎಂದು ಸೋನಮ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ನಟ-ನಿರ್ಮಾಪಕ ಅನಿಲ್ ಕಪೂರ್ ಅವರ ಪುತ್ರಿ ಗುರುವಾರ ಟ್ವಿಟ್ಟರ್ ಮೂಲಕ ಗುಣಮುಖಳಾಗುತ್ತಿದ್ದ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ರಾಜ್ ಕೋಟ್ ಆಸ್ಪತ್ರೆಯಲ್ಲಿ ಎಚ್೧ ಎನ್೧ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದ ಮೇಲೆ ಕೋಕಿಲಬೇನ್ ಆಸ್ಪತ್ರೆಗೆ ಮಾರ್ಚ್ ೧ ರಂದು ವರ್ಗಾಯಿಸಲಾಗಿತ್ತು.
ಸಲ್ಮಾನ್ ಖಾನ್ ಅವರೊಂದಿಗೆ ನಟಿಸುತ್ತಿರುವ "ಪ್ರೇಮ್ ರತನ್ ಧನ ಪಾಯೋ" ಸಿನೆಮಾದ ಚಿತ್ರೀಕರಣಕ್ಕೆ ಸೋನಮ್ ರಾಜಕೋಟ್ ನಲ್ಲಿದ್ದರು.