ರಾಟೆ ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ನಾಳೆ 'ರಾಟೆ', 'ಕೃಷ್ಣಲೀಲಾ' ತೆರೆಗೆ

ಭರವಸೆಯ ನಿರ್ದೇಶಕರ ಬಹು ನಿರೀಕ್ಷಿತ ಎರಡು ಕನ್ನಡ ಚಲನಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ಬೆಂಗಳೂರು: ಭರವಸೆಯ ನಿರ್ದೇಶಕರ ಬಹು ನಿರೀಕ್ಷಿತ ಎರಡು ಕನ್ನಡ ಚಲನಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ವಿಶ್ವಕಪ್ ಜ್ವರದಿಂದ ಬಳಲುತ್ತಿರುವ ಕನ್ನಡಚಿತ್ರರಂಗಕ್ಕೆ ಈ ಚಲನಚಿತ್ರಗಳು ಸ್ವಲ್ಪ ಉಪಶಮನ ನೀಡಲಿವೆ ಎಂದೇ ನಂಬಲಾಗಿದೆ.

ಡೈರೆಕ್ಟರ್ ಸ್ಪೆಶಲ್ ಖ್ಯಾತಿಯ ಧನಂಜಯ್ ಮತ್ತು ಲೂಸಿಯಾ ಖ್ಯಾತಿಯ ಶ್ರುತಿ ಹರಿಹರನ್ ನಟಿಸಿರುವ ರಾಟೆ ಚಲನಚಿತ್ರದ ನಿರ್ದೇಶಕ ಎ ಪಿ ಅರ್ಜುನ್. ತಮ್ಮ ಹಿಂದಿನ ಎರಡು ಚಿತ್ರಗಳಾದ ಅಂಬಾರಿ ಮತ್ತು ಆದ್ಧೂರಿ ಶತದಿನ ಕಂಡ ಚಿತ್ರಗಳು. ಈಗ ಹ್ಯಾಟ್ರಿಕ್ ಹೊಡೆಯಲು ಅರ್ಜುನ್ ಸಿದ್ಧರಾಗಿದ್ದಾರೆ. ಈ ಸಿನೆಮಾಗೆ ಸಂಗೀತ ನೀಡಿರುವ ಹರಿಕೃಷ್ಣ ಸಿನೆಮಾದ ನಿರ್ಮಾಪಕರು ಕೂಡ ಎಂಬುದು ವಿಶೇಷ.

ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಅಂತಹ ತಾಜಾ ಸಿನೆಮಾಗಳನ್ನು ನಿರ್ದೇಶಿಸಿದ ಶಶಾಂಕ್ ಅವರ 'ಕೃಷ್ಣಲೀಲಾ' ಕೂಡ ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಮದುವೆಯಾದ ಅಜಯ್ ರಾವ್ ಅವರ ಹಿಂದಿನ ಚಿತ್ರ 'ಜೈ ಭಜರಂಗ ಬಲಿ' ಅಷ್ಟೇನೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಅಲ್ಲದೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಪರಿಚಯವಾದ ಮಯೂರಿ ಅವರಿಗೆ ಇದು ಚೊಚ್ಚಲ ಚಲನಚಿತ್ರ. ಅಜಯ್ ರಾವ್ ಅವರೇ ನಿರ್ಮಾಣ ಮಾಡಿರುವ ಈ ಸಿನೆಮಾ ಅಜಯ್-ಶಶಾಂಕ್ ಜುಗಲ್ ಬಂಧಿಯಲ್ಲಿ ಯಶಸ್ಸು ಗಳಿಸುವುದೇ ಎಂಬುದನ್ನು ಕಾಡು ನೋಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT