ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಪುನೀತ್ ಜೊತೆ ನಟಿಸಲಿರುವ ಸೋನಂ ಬಾಜ್ವಾ

ಕನ್ನಡ ಚಿತ್ರೋದ್ಯಮಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ನೈನಿತಾಲಿನ ಮಾಡೆಲ್ ಮತ್ತು ನಟಿ ಸೋನಂ ಬಾಜ್ವಾ ಈ ಹೊಸ ಎಂಟ್ರಿ.

ಸೋನಂ ಬಾಜ್ವಾ
Guruprasad Narayana
Updated On : 23 Mar 2015, 9:48 am

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ನೈನಿತಾಲಿನ ಮಾಡೆಲ್ ಮತ್ತು ನಟಿ ಸೋನಂ ಬಾಜ್ವಾ ಈ ಹೊಸ ಎಂಟ್ರಿ. ಮೊದಲು ಎರಡು ಪಂಜಾಬಿ ಚಲನಚಿತ್ರಗಳಾದ 'ಬೆಸ್ಟ್ ಆಫ್ ಲಕ್' ಮತ್ತು 'ಪಂಜಾಬ್ ೧೯೮೪' ಗಳಲ್ಲಿ ನಟಿಸಿದ್ದ ಸೋನಂ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ ಕೂಡ.

ನೀಳಕಾಯದ ಈ ಪಂಜಾಬಿ ಚೆಲುವೆ ಎಂ ಸರವಣನ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಎನ್ ಕೆ ಲೋಹಿತ್ ಅವರು ನಿರ್ಮಿಸಿರುವ ಈ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಪ್ರಮುಖ ನಟ. ಮೂಲಗಳ ಪ್ರಕಾರ ೧೫ ದಿನಗಳ ಹಿಂದೆಯೆ ನಟಿಯ ಜೊತೆ ಒಪ್ಪಂದವಾಗಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಆಗಲಿದೆ.

ಫೆಮಿನಾ ಮಿಸ್ ಇಂಡಿಯಾ ೨೦೧೨ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸೋನಂ, ಫರಾ ಖಾನ್ ಅವರ 'ಹ್ಯಾಪಿ ನ್ಯೂ ಯಿಯರ್' ಗೆ ಕೂಡ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಯಿತ್ತು ಆದರೆ ಅಂತಿಮ ಕ್ಷಣದಲ್ಲಿ ಹೊರಬಿದ್ದಿದ್ದರು. ಎಸ್ ಎಸ್ ತಮನ್ ಅವರ ಸಂಗೀತ ಇರುವ ಈ ಚಲನಚಿತ್ರಕ್ಕೆ ಶಣ್ಮುಗಸುಂದರಮ್ ಸಿನೆಮ್ಯಾಟೋಗ್ರಾಫರ್. ಶರವಣನ್ ಅವರ ಈ ಯೋಜನೆ ಏಪ್ರಿಲ್ ನಲ್ಲಿ ಪ್ರಾರಂಭವಾಗಲಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments