ರಣವೀರ್ - ರೋಷಣಿ 
ಸಿನಿಮಾ ಸುದ್ದಿ

ರಾಜರ ಊರಲ್ಲಿ `ಅಜರಾಮರ'

ಅಭಯ್ ಜಿ ಗಂಜ್ಯಲಾ ಅವರ ಅಭಯ್ ಸಿನೆಮಾ ವಿಶನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ `ಅಜರಾಮರ', ಅರಮನೆಗಳ ನಗರ, ರಾಜರು ಆಳಿದ ನಾಡು ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದೆ.

`ಅಜರಾಮರ'ವಾಗಿ ಉಳಿಯಲು ನಾಯಕ ಕೈಗೊಳ್ಳುವ ಕೆಲಸ ಎಂತಹುದು ಎಂದು ನಿರ್ದೇಶಕ ರವಿ ಕಾರಂಜಿ ಮೊದಲ ಸಿನಿಮಾದಲ್ಲಿ ವಿವಿಧ ಜವಾಬ್ದಾರಿಗಳನ್ನು ತೆಗೆದುಕೊಂಡು ಪ್ರಯತ್ನ ಮಾಡುತ್ತಿದ್ದಾರೆ. ದೂರದರ್ಶನದಲ್ಲಿ ಸಾಕ್ಷ್ಯ ಚಿತ್ರ ಹಾಗೂ ಕೆಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದ ಅನುಭವ ರವಿ ಕಾರಂಜಿ ಅವರಿಗಿದೆ.

ಜಾಹೀರಾತು ವಿಭಾಗದಲ್ಲಿ ಪಳಗಿದ ಮಡಿಕೇರಿ ಮೂಲದ ರಣವೀರ್ ಅವರು ಈ ಚಿತ್ರದ ನಾಯಕ. ಈ ಚಿತ್ರದಲ್ಲಿ ಬುದ್ದಿವಂತ ಅನಾಥನಾಗಿ ಹಳ್ಳಿಯಿಂದ ನಗರಕ್ಕೆ ಬಂದು ಸಾಧನೆ ಮಾಡುವ ಹಾದಿಯಲ್ಲಿ ಇವರಿಗೆ ನಾಯಕಿ ನೆರವಾಗುತ್ತಾರೆ.

ಚಿಕ್ಕ ವಯಸ್ಸಿನಲ್ಲೇ ಅಭಿನಯ ಮಾಡಿರುವ ಮೈಸೂರಿನ ಹುಡುಗಿ ರೋಷಣಿ, ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ ಆಗಿ, ಸಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೆಂದ್ರ ಪ್ರಸಾದ್ ಮೇಷ್ಟ್ರ ಪಾತ್ರದಲ್ಲಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಖ್ಯಾತಿ ಪಡೆದ ವಿಲನ್ ಮಧುಸೂಧನ್ 'ಅಜರಾಮರ'ದಲ್ಲಿ ಅಭಿನಯಿಸಿದ್ದಾರೆ.

ಹರಿ ನಾಯ್ಕ ಅವರ ಛಾಯಾಗ್ರಹಣ, ರಾಜ್ ಕಿಶೋರ್ ಅವರ ಸಂಗೀತ, ವಿಶ್ವ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ, ರಾಜಕಮಲ್ ಹಾಗೂ ಹರೀಶ್ ಅವರ ನಿರ್ದೇಶನ ಸಹಾಯ ಒದಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ