ಪಂಚಭಾಷಾ ನಟಿ ರಂಭಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರು ಸಹ ಆರೋಗ್ಯವಾಗಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ವಿವಾಹವಾಗಿ ಕೆನಡಾದಲ್ಲಿ ನೆಲೆಯೂರಿದ್ದ ರಂಭಾ, ಈ ಮೊದಲು ಸಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೀಗ ಮೂರು ವರ್ಷ ಪ್ರಾಯ. ರಂಭಾ ಟೊರಂಟೋದಲ್ಲಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯವಾಗಿದ್ದಾರೆ ಎಂದು ಕುಟುಂಬ ತಿಳಿಸಿದೆ.
ರಂಭಾ 1990ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ರಿಯಾಲಿಟಿ ಷೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರವಿಚಂದ್ರನ್ ಜೊತೆಯಲ್ಲಿ 'ಓ ಪ್ರೇಮವೆ', ಪಾಂಡು ರಂಗ ವಿಠಲ', ಶಿವರಾಜ್ ಕುಮಾರ್ ಜೊತೆ 'ಭಾವ ಭಾವಮೈದ', 'ಗಂಡುಗಲಿ ಕುಮಾರರಾಮ', ಸಾಹಸಸಿಂಹ ವಿಷ್ಣುವರ್ಧನ್ ಜೊತೆ 'ಸಾಹುಕಾರ', ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ 'ಸರ್ವರ್ ಸೋಮಣ್ಣ' ನಾಯಕಿಯಾಗಿ ಮಿಂಚಿದ ರಂಭಾ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದರು. ಅಲ್ಲದೇ ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ಒಬ್ಬರಾದ ರಂಭಾ, ಬಾಲಿವುಡ್ ಚಿತ್ರಗಳಲ್ಲೂ ನಟಿಸಿದ್ದರು.