ಯಶಸ್ವಿ ಚಿತ್ರಗಳ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ಅವರ `ಕಟ್ಟೆ'...ದಿ ಲಕ್ಕಿ ಪ್ಲೇಸ್ ಈ ವಾರ ತೆರೆಗೆ ಬರುತ್ತಿದೆ.
ಶ್ರೀರೇಣುಕ ಮೂವಿ ಮಕೇರ್ಸ್ ಅವರ ಎ.ಎಂ.ಉಮೇಶ್ ರೆಡ್ಡಿ ನಿರ್ಮಾಣದ `ಕಟ್ಟೆ'ಗೆ ಓಂ ಪ್ರಕಾಷ್ ರಾವ್ ಅವರ ಮಗಳು ಶ್ರಾವ್ಯ ನಾಯಕಿ. ಇವರಿಗೆ ನಾಯಕ ನಾಗಶೇಖರ್. ನವ ನಟ ಚಂದನ್ ಅಭಿನಯದ ಮೊದಲ ಸಿನಿಮಾ ಇದಾಗಿದ್ದು, ಕಿರು ತೆರೆಯ ಜನಪ್ರಿಯ ನಟನಿಗೆ ನಾಯಕಿಯಾಗಿ ರೂಕ್ಸಾ ಇದ್ದಾರೆ.
ಓಂಪ್ರಕಾಶ್ ಅವರೆ ಚಿತ್ರಕಥೆ ಬರೆದಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ಹಾಗೂ ತ್ರಿಭುವನ್ ಅವರ ನೃತ್ಯ ನಿರ್ದೇಶನವಿದೆ.
ಗೀತಾ, ಓಂ ಪ್ರಾಕಾಶ್ ರಾವ್, ಶ್ರೀ ನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.