ಸಿನಿಮಾ ಸುದ್ದಿ

'ನಾಟಿ ಕೋಳಿ' ಸೆಟ್ಟಿನಲ್ಲಿ ಗಲಾಟೆ; ಚಿತ್ರೀಕರಣ ಮುಂದೂಡಿಕೆ

Guruprasad Narayana

ಬೆಂಗಳೂರು: ಶ್ರೀನಿವಾಸ ರಾಜು ನಿರ್ದೇಶನದ 'ನಾಟಿ ಕೋಳಿ' ಚಲನಚಿತ್ರದ ಫೋಟೋಶೂಟ್ ವೇಳೆ ನಡೆದ ಗಲಾಟೆಯಿಂದ ಚಲನಚಿತ್ರದ ಚಿತ್ರೀಕರಣ ಮುಂದೂಡಲಾಗಿದೆ. ವಿಲ್ಸನ್ ಗಾರ್ಡನ್ನಿನ ಶೀತಲ್ ಜೈನ್ ಅವರ ಸ್ಟುಡಿಯೋಗೆ ಏಕಾಏಕಿ ನುಗ್ಗಿದ ಹುಲಿ ನಿರ್ಮಾಪಕ ಶಿವಪ್ರಕಾಶ್, ನಿರ್ಮಾಪಕ ವೆಂಕಟ್ ಮತ್ತು ಶ್ರೀನಿವಾಸ ರಾಜು ಅವರ ಮೇಲೆ ಹಲ್ಲೆ ಮಾಡಿದರು ಎಂದು ರಾಜು ಆರೋಪಿಸಿದ್ದಾರೆ.

ರಾಗಿಣಿ ಅವರ ಪ್ರಿಯತಮ ಎಂದು ಹೇಳಿಕೊಂಡು ಸ್ಟುಡಿಯೋ ಒಳಗೆ ನುಗ್ಗಿದ ಶಿವಪ್ರಕಾಶ್ ಹಲ್ಲೆ ನಡೆಸಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ. ಈ ಘಟನೆ ನಡೆದಾಗ ರಾಗಿಣಿ ಅವರು ವಸ್ತ್ರಕೋಣೆಯಲ್ಲಿದ್ದರು ಎಂದು ತಿಳಿದುಬಂದಿದೆ. "ನನ್ನನು ಬೆದರಿಸಿದ ಶಿವಪ್ರಕಾಶ್ ಕೊಲೆ ಬೆದರಿಕೆಯನ್ನು ಹಾಕಿದರು. ವೆಂಕಟ್ ಮಧ್ಯ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದರು. ಫೋಟೋ ಶೂಟ್ ಅನ್ನು ಮಧ್ಯದಲ್ಲೇ ನಿಲ್ಲಿಸಬೇಕಾಗಿ ಬಂತು" ಎಂದು ರಾಜು ತಿಳಿಸಿದ್ದಾರೆ. ಇದರಿಂದು ಸುಮಾರು ೫ ಲಕ್ಷ ನಷ್ಟವಾಗಿದೆ ಎಂದಿದ್ದಾರೆ ರಾಜು. ಶಿವಪ್ರಕಾಶ್ ಯಾರು ಎಂದೇ ನನಗೆ ತಿಳಿದಿಲ್ಲ ಎಂದಿದ್ದಾರೆ ರಾಗಿಣಿ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ ನಾಟಿ ಕೋಳಿ ಚಿತ್ರದ ನಿರ್ಮಾಪಕ ವೆಂಕಟ್ ದೂರು ಸಲ್ಲಿಸಿದ್ದಾರೆ ಎಂದು ರಾಜು ತಿಳಿಸಿದ್ದಾರೆ. "ಈ ಮೊದಲು ವೆಂಕಟ್ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ನಿಶ್ಚಯಿಸಿದ್ದರು. ಆದರೆ ಅದು ಅವರ ಸಮಯವನ್ನು ಹಾಳುಮಾಡುವುದರಿಂದ ನಾನೇ ಅವರಿಗೆ ತಡೆದು ಸಲಹೆ ನಿಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ" ಎಂದು ರಾಜು ತಿಳಿಸಿದ್ದಾರೆ.

ಚಲನಚಿತ್ರದ ಚಿತ್ರೀಕರಣವನ್ನು ಒಂದು ವಾರದವರೆಗೆ ಮೂಂದೂಡಲಾಗಿದೆ. ಈ ಪ್ರಕರಣದಲ್ಲಿ ನನ್ನದೇನು ಪಾತ್ರವಿಲ್ಲ. ನನ್ನನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ರಾಗಿಣಿ ಟ್ವೀಟ್ ಮಾಡಿದ್ದಾರೆ.

SCROLL FOR NEXT