ಬೆಂಗಳೂರು: ಕೊನೆಯ ೧೦ ದಿನಗಳಿಂದ ತನ್ನ ಸುತ್ತಮುತ್ತಲ ಜನಗಳ ಸಂಪರ್ಕದಿಂದ ದೂರವಿರುವ ನಟ ನಿರ್ದೇಶಕ ಉಪೇಂದ್ರ ಉಪ್ಪಿ-೨ ರಲ್ಲಿ ಕಾರ್ಯನಿರತರಾಗಿದ್ದಾರೆ. ಹೀಗೆ ಮಾಡಿದ್ದರಿಂದ ೨ ಹಾಡುಗಳು ಚಿತ್ರೀಕರಣ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ. "ನನಗೆ ಬೇರೆ ಯಾವುದೇ ಗಲಾಟೆಗಳು ಬೇಕಿರಲಿಲ್ಲ. ವಿಚಲಿತನಾಗಿದ್ದರೆ ನಿಗದಿಯಾದಂತೆ ಚಿತ್ರೀಕರಣ ಮುಗಿಸುವುದು ಕಷ್ಟವಾಗುತ್ತಿತ್ತು. ಎರಡು ಹಾಡುಗಳು ಸಾಂದರ್ಭಿಕವಾದವು. ಇವುಗಳನ್ನು ಆಸ್ಟ್ರೇಲಿಯ ರೂಪದರ್ಶಿ ಹಾಗು ನಟಿ ಕ್ರಿಶ್ಚಿನ ಅಖೀವ ಅವರೊಂದಿಗೆ ಮೈಸೂರು ಮತ್ತು ಬೆಂಗಳುರಿನಲ್ಲಿ ಚಿತ್ರೀಕರಿಸಲಾಗಿದೆ" ಎನುತ್ತಾರೆ ಉಪ್ಪಿ. ಇನ್ನೊಂದೇ ಹಾಡಿನ ಚಿತ್ರೀಕರಣ ಬಾಕಿ ಇದ್ದು ಮುಂದಿನ ತಿಂಗಳು ಚಿತ್ರೀಕರಣ ನಡೆಸುವುದಾಗಿ ಹೇಳಿದ್ದಾರೆ.
ಹಾಗೆಯೆ ಚಿತ್ರೀಕರಣ ನಂತರದ ಕೆಲಸಗಳೊಂದಿಗೂ ಉಪ್ಪಿ ಕಾರ್ಯನಿರತರಾಗಿದ್ದಾರೆ. "ಸದ್ಯಕ್ಕೆ ರೀ-ರೆಕಾರ್ಡಿಂಗ್ ಮತ್ತು ಇತರ ಎಫೆಕ್ಟ್ ಗಳ ಕೆಲಸ ನಡೆಯುತ್ತಿದೆ" ಎಂದು ಅವರು ತಿಳಿಸಿದ್ದಾರೆ.
೧೯೯೯ರ ಉಪೇಂದ್ರ ಚಿತ್ರದ ಎರಡನೆ ಭಾಗ ಎನ್ನಲಾಗುತಿರುವ ಈ ಸಿನೆಮಾಗೂ ವಿಭಿನ್ನ ರೀತಿಯ ನಿರೂಪಣೆ ಇರುತ್ತದೆ ಎನ್ನಲಾಗಿದೆ. ಸಿನೆಮಾದಲ್ಲಿ ಪರುಲ್ ಯಾದವ್ ಕೂಡ ನಟಿಸಿದ್ದು, ಪ್ರಿಯಾಂಕ ಉಪೇಂದ್ರ ಕೂಡ ಒಂದು ಅತಿಥಿ ಪತ್ರವನ್ನು ನಿರ್ವಹಿಸಿದ್ದಾರೆ.