ರೆಬೆಲ್ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

'ರೆಬೆಲ್' ಗೆ ಕೊನೆಗೂ ಮುಕ್ತಿ

ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಬಹುನಿರೀಕ್ಷಿತ ಚಿತ್ರ ತಡವಾಗಿಯಾದರೂ, ಈ ವಾರ ತೆರೆ ಕಾಣಲು ಸಿದ್ಧವಾಗಿದೆ.

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ಬಹುನಿರೀಕ್ಷಿತ ಚಿತ್ರ ತಡವಾಗಿಯಾದರೂ, ಈ ವಾರ ತೆರೆ ಕಾಣಲು ಸಿದ್ಧವಾಗಿದೆ. ಬಾಬು ಅವರ ಪುತ್ರ ಆದಿತ್ಯ ಮತ್ತು ನಟಿ ಸಂಜನಾ ನಟನೆಯ ಈ ಚಿತ್ರ ಬಾಬು ಆವರು ಸುಮಾರು ಒಂದು ದಶಕದ ನಂತರ ಬಿಡುಗಡೆ ಮಾಡುತ್ತಿರುವ ಚಿತ್ರ. ಅವರ ಹಿಂದಿನ ಸಿನೆಮಾ ಮೋಹಿನಿ ೨೦೦೬ರಲ್ಲಿ ಬಿಡುಗಡೆಯಾಗಿತ್ತು.

ಸದ್ಯಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಬಾಬು "ನಾನು ರೆಬೆಲ್ ಚಿತ್ರೀಕರಣ ಮಾಡುತ್ತಿರುವಾಗ ಅಮೆರಿಕಾಕ್ಕೆ ಹೋಗಬೇಕಾಗಿ ಬಂತು. ಅದು ಶೈಕ್ಷಣಿಕ ಪ್ರವಾಸ. ಇತ್ತೀಚಿನ ದಿನದ ಬೆಳವಣಿಗೆಯ ಗ್ರಾಫಿಕ್ಸ್ ಮತ್ತು ಚಲನಚಿತ್ರ ತಂತ್ರಜ್ಞಾನಗಳನ್ನು ತಿಳಿದುಬಂದೆ. ಜೇಮ್ಸ್ ಕ್ಯಾಮರಾನ್ ಅವರನ್ನು ಕೂಡ ಭೇಟಿ ಮಾಡಿಬಂದೆ" ಎನ್ನುತ್ತಾರೆ ಬಾಬು.

"ನಾನು ಅಮೇರಿಕಾದಲ್ಲೂ ೨ತಿಂಗಳು ಇದ್ದೆ ಮತ್ತು ಹಾಲಿವುಡ ಪ್ರವಾಸ ಮಾಡಿದೆ. ನಂತರ ಸಿಲೋನ್ ಗೆ ಕೂಡ ತೆರಲು ಅಲ್ಲಿನ ಸರ್ಕಾರದ ಜೊತೆ ಸಹ ನಿರ್ಮಾಣ ಮಾಡುವ ಸಾಧ್ಯತೆಗಳನ್ನು ಕೂಡ ಚರ್ಚಿಸಿ ಬಂದೆ" ಎನ್ನುತ್ತಾರೆ ಬಾಬು.

ರೆಬೆಲ್ ಸಿನೆಮಾದ ವಿಷಯ ಇಂದಿಗೂ ಕೂಡ ಪ್ರಸ್ತುತ. ಇದು ಸೇನೆಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ಎಂದಿದ್ದರೆ ಬಾಬು.

"ಸೇನೆ ಹೇಗೆ ಸೈನಿಕರ ಕಲ್ಯಾಣದ ಬಗ್ಗೆ ಚಿಂತಿಸುವುದಿಲ್ಲ ಎಂಬುದನ್ನು ಚರ್ಚಿಸಿದ್ದೇನೆ. ಸುಹಾಸಿನಿ ಐಎಸ್ ಅಧಿಕಾರಿ ಮತ್ತು ಭದ್ರತಾ ಕಾರ್ಯದರ್ಶಿ ಪಾತ್ರವಹಿಸಿದ್ದಾರೆ. ಆದಿತ್ಯ ಅವರ ಮಗನಾಗಿ ಕೆಲಸ ಮಾಡಿದ್ದಾನೆ. ಚಲನಚಿತ್ರ ಪರಿಹಾರಕ್ಕಾಗಿ ಹುಡುಕುತ್ತದೆ ಹಾಗೂ ಕೊನೆಗೆ ಭಾರತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ನಾನು ದೆಹಲಿ ಸಿಂಗಪುರ ಮತ್ತು ಇತರ ಪ್ರದೇಶಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Canada ವಿರುದ್ಧ Trump ಸುಂಕಾಸ್ತ್ರ; 20 ಬಿಲಿಯನ್ ಡಾಲರ್‌ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ, ಪ್ರತೀಕಾರದ ಎಚ್ಚರಿಕೆ ನೀಡಿದ Carney..!

‘ಪನೀರ್’ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟಕ್ಕೆ ನಿರ್ಬಂಧ: ರಾಜ್ಯದಲ್ಲಿ ಒಂದು ವರ್ಷ ನಿಷೇಧ..!

'Economic D-Day' ಘೋಷಣೆ: Iran ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನ ಅಸ್ತ್ರ; ಇದು ಆರ್ಥಿಕ ಭಯೋತ್ಪಾದನೆ-‘ಜಗತ್ತನ್ನು ವಸಾಹತು ಮಾಡುವ ಹುನ್ನಾರ’- ಇರಾನ್ ಆಕ್ರೋಶ

ಹಾರ್ಮುಜ್ ಜಲಸಂಧಿ ನಮ್ಮದೇ: ಟ್ರಂಪ್ ಸ್ಫೋಟಕ ಹೇಳಿಕೆ; ನಮ್ಮ ಭೂಪ್ರದೇಶಕ್ಕೆ ಕೈಹಾಕಿದರೆ ಸರ್ವನಾಶ ಗ್ಯಾರಂಟಿ- ಟೆಹ್ರಾನ್ ಖಡಕ್ ವಾರ್ನಿಂಗ್

Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ