ಸಿನಿಮಾ ಸುದ್ದಿ

ಗಾಯಕನಾದ ಹಾಸ್ಯನಟ ಚಿಕ್ಕಣ್ಣ

Guruprasad Narayana

ಬೆಂಗಳೂರು: ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಹಾಸ್ಯನಟ ಚಿಕ್ಕಣ್ಣ ಈಗ ಮತ್ತೊಂದು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಕಿರಾತಕ, ಅಧ್ಯಕ್ಷ, ರಾಜ ಹುಲಿ, ಬಾಂಬೆ ಮಿಠಾಯಿ ಚಿತ್ರಗಳಲ್ಲಿ ತಮ್ಮ ಹಾಸ್ಯನಟನೆಯಿಂದ ಪ್ರೇಕ್ಷಕರ ಮನಗೆದ್ದ ಚಿಕ್ಕಣ್ಣ ಈಗ ಹಿನ್ನಲೆ ಗಾಯಕನಾಗಿ ಮಾರ್ಪಾಡಾಗಿದ್ದಾರೆ.

ಎರಡು ಸಿನೆಮಾಗಳಲ್ಲಿ ಈಗ ಚಿಕ್ಕಣ್ಣ ಹಿನ್ನಲೆಗಾಯಕರಾಗಿದ್ದರೆ. ಫೇಸ್ ಬುಕ್ ನಲ್ಲಿ ಮಾತ್ರ ಪ್ರಸಾರವಾಗಲಿರುವ 'ಹಲೋ' ಎಂಬ ಅಂತರ್ಜಾಲ ಧಾರಾವಾಹಿ ಮತ್ತು ಗಿರಿಗಿಟ್ಲೆ ಸಿನೆಮಾಗಳಿಗೆ ಚಿಕ್ಕಣ್ಣ ಕಂಠದಾನ ಮಾಡಿದ್ದಾರೆ. "ಅವಿರಾಮ್ ಕಂಠೀರವ ನಿರ್ದೇಶಿರುವ ಹಲೋ ಧಾರಾವಾಹಿಯ ಹಾಡಿಗೆ ಹಾಸ್ಯ ಲೇಪನ ಇದೆ. ದಿನರಾತ್ರಿ ದೂರವಾಣಿ ಬಳಕೆಯ ಉಪಯೋಗಗಳು ಮತ್ತು ಅವಾಂತರಗಳ ಹಾಸ್ಯ ಕಥೆಯನ್ನು ಇದು ಹೊಂದಿದೆ. ಹಿನ್ನಲೆ ಗಾಯಕನಾಗುವುದು ಕಷ್ಟದ ಕೆಲಸ, ಅವಿರಾಮ್ ಅವರ ಪ್ರತಿಭೆಗೆ ಸೋತು ಒಪ್ಪಿಕೊಂಡೆ. ಪ್ರೀತಿಯಿಂದ ತಿರಸ್ಕೃತಗೊಂಡ ಭಾವನಾತ್ಮಕ ಹಾಡನ್ನು ಗಿರಿಗಿಟ್ಲೆ ಸಿನೆಮಾದಲ್ಲಿ ಹಾಡಿದ್ದೇನೆ" ಎನ್ನುತ್ತಾರೆ ನಟ ಚಿಕ್ಕಣ್ಣ.

ಬಾಂಬೆ ಮಿಠಾಯಿಯ ನಂತರ ಚಿಕ್ಕಣ್ಣ ಸುದೀಪ್ ಅವರ 'ರನ್ನ' ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಯಶ್ ಅವರ ಮಾಸ್ಟರ್ ಪೀಸ್ ಹಾಗು ನಮಗಾಗಿ, ರಾಮಲೀಲಾ, ಟೈಸನ್, ನಾಗರಕಟ್ಟೆ, ಚೆರ್ರಿ, ಮದುವೆಯ ಮಮತೆಯ ಕರೆಯೋಲೆ ಸಿನೆಮಾಗಳಲ್ಲು ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

SCROLL FOR NEXT