ಮುಂಬಯಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಮುಂದಿನ ಚಿತ್ರಕ್ಕಾಗಿ ವರ್ಕ್ ಔಟ್ ಮಾಡ್ತಿದ್ದಾರಂತೆ. 72 ವರ್ಷದ ಬಿಗ್ ಬಿ ಈ ವಯಸ್ಸಿನಲ್ಲೂ ತಮ್ಮ ದೇವನ್ನು ಫಿಟ್ ಅಂಡ್ ಫೈನ್ ಮಾಡಿಕೊಳ್ಳಲು ಜಿಮ್ ಮೊರೆ ಹೋಗಿದ್ದಾರಂತೆ. ಹೀಗಂತ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಯಾವುದೇ ಆರೋಗ್ಯ ಸಮಸ್ಯೆಯಿಂದ ತಾವು ವ್ಯಾಯಾಮ ಮಾಡಲು ಜಿಮ್ ಗೆ ಹೋಗಿ ಕಸರತ್ತು ಮಾಡುತ್ತಿಲ್ಲ. ಮುಂದಿನ ಚಿತ್ರಗಳಿಗಾಗಿ ಜಿಮ್ ಗೆ ಹೋಗುತ್ತಿರುವುದಾಗಿ ತಿಳಿಸಿರುವ ಅವರು ಇನ್ನೂ ಮೂರು ತಿಂಗಳು ಜಿಮ್ ನಲ್ಲಿ ವರ್ಕ್ ಔಟ್ ಮಾಡಿ ದೇಹವನ್ನು ಗಟ್ಟಿಗೊಳಿಸಲಿದ್ದಾರಂತೆ.
ಏಕಾಏಕಿ ಜಿಮ್ ನಲ್ಲಿ ವ್ಯಾಯಾಮ ಮಾಡಲು ಹೋಗುತ್ತಿರುವುದರಿಂದ ಎಲ್ಲರಿಗೂ ಆಶ್ಟರ್ಯವಾಗುತ್ತಿದೆ. ಜೊತೆಗೆ ಎಲ್ಲರು ತಮ್ಮನ್ನು ಜಿಮ್ ಮಾಡುತ್ತಿರುವ ಉದ್ದೇಶದ ಬಗ್ಗೆ ಕೇಳುತ್ತಿದ್ದಾರೆ. ಹೀಗಾಗಿ ಬ್ಲಾಗ್ ನಲ್ಲಿ ಅದರ ಕಾರಣ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ. ಎಲ್ಲರೂ ಭಾವಿಸಿರುವ ಹಾಗೆ ಯಾವುದೋ ಆರೋಗ್ಯ ಸಮಸ್ಯಯಿಂದಾಗಿ ತಾವು ಜಿಮ್ ಗೆ ಹೋಗುತ್ತಿಲ್ಲ ಎಂದು ಹೇಳಿರುವ ಬಿಗ್ ಬಿ ಅಭಿಮಾನಿಗಳ ಹಾಗೂ ಬಾಲಿವುಡ್ ಮಂದಿಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.