ನಟಿ ಶ್ರಾವ್ಯ 
ಸಿನಿಮಾ ಸುದ್ದಿ

ನಟಿ ಶ್ರಾವ್ಯಗೆ ಅಶ್ಲೀಲ ಸಂದೇಶ: ದೂರು ದಾಖಲು

ಅನಾಮಧೇಯ ಮೊಬೈಲ್ ಫೋನ್ ಸಂಖ್ಯೆಯಿಂದ ಅಶ್ಲೀಲ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಎನ್. ಓಂಪ್ರಕಾಶ್ ರಾವ್ ಪುತ್ರಿ ನಟಿ ಶ್ರಾವ್ಯ ಅವರು ವಿಜಯನಗರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ...

ಬೆಂಗಳೂರು: ಅನಾಮಧೇಯ ಮೊಬೈಲ್ ಫೋನ್ ಸಂಖ್ಯೆಯಿಂದ ಅಶ್ಲೀಲ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಎನ್. ಓಂಪ್ರಕಾಶ್ ರಾವ್ ಪುತ್ರಿ ನಟಿ ಶ್ರಾವ್ಯ ಅವರು ವಿಜಯನಗರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಕೆಲವು ದಿನಗಳಿಂದ ತಮ್ಮ ಮೊಬೈಲ್‍ಗೆ ಎಸ್‍ಎಂಎಸ್ ಹಾಗೂ ವ್ಯಾಟ್ಸ್ ಆ್ಯಪ್‍ಗೆ ಅನಾಮಧೇಯ ವ್ಯಕ್ತಿಯೊಬ್ಬನಿಂದ ನಿರಂತರವಾಗಿ ಅಶ್ಲೀಲ  ಸಂದೇಶಗಳು ಬರುತ್ತಿವೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಶ್ರಾವ್ಯ ದೂರಿನಲ್ಲಿ ವಿವರಿಸಿದ್ದಾರೆ.

ಈ ದೂರು ಸ್ವೀಕರಿಸಿರುವ ವಿಜಯನಗರ ಪೊಲೀಸರು, ನಟಿ ಮೊಬೈಲ್‍ಗೆ ಸಂದೇಶ ಬಂದಿರುವ ಮೊಬೈಲ್ ಫೋನ್ ಸಂಖ್ಯೆಯ ಮೂಲಕ ಆರೋಪಿ  ಪತ್ತೆಗೆ ಮುಂದಾಗಿದ್ದಾರೆ. ಅನಾಮಧೇಯ ನಂಬರ್‍ನ ಮೊಬೈಲ್ ಕರೆ ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಟಿ  ಶ್ರಾವ್ಯ, ಇತ್ತೀಚೆಗೆ ತೆರೆಕಂಡ ರೋಜ್ ಹಾಗೂ ಕಟ್ಟೆ ಸೇರಿದಂತೆ ಇನ್ನಿತರ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಗರ ಪ್ರದೇಶಗಳಿಗೆ 25- ಗ್ರಾಮೀಣ ಪ್ರದೇಶಗಳಿಗೆ 40 ದಿನಗಳಿಗೊಮ್ಮೆ ಸಿಲಿಂಡರ್‌ ಪೂರೈಕೆ; ವಾಣಿಜ್ಯ ಬಳಕೆದಾರರಿಗೆ GAIL ನೋಂದಣಿ ಕಡ್ಡಾಯ: ರಾಜ್ಯ ಸರ್ಕಾರ

West Asia war effect: ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 1,555 ಅಂಕ ಕುಸಿತ, ನಿಮಿಷಗಳಲ್ಲಿ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ ನಷ್ಟ..!

ನ್ಯೂಯಾರ್ಕ್‌: ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ Air Canada Express ವಿಮಾನ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ, ಇಬ್ಬರು ಸಾವು-Video

West Asia war: ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಾದರೆ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಇರಾನ್ ಕಠಿಣ ಎಚ್ಚರಿಕೆ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು; Video

SCROLL FOR NEXT