ಶರಣ್ 
ಸಿನಿಮಾ ಸುದ್ದಿ

ಬಸ್ಯಾ ಹಾಡಿದ: ಶರಣ್ ಕಂಠಸಿರಿಯಲ್ಲಿ ಬುಲೆಟ್ ಹಾಡು

ಮೊನ್ನೆ ಅರ್ಜುನ್ ಜನ್ನಾ ಅವರ ಸ್ಟುಡಿಯೋದಲ್ಲಿ ನಾಯಕ ನಟ ಶರಣ್ ಅವರಿಗೆ ಇನ್ನೊಂದು ಸಂಗೀತ ಸಂಭ್ರಮ.

ಮೊನ್ನೆ ಅರ್ಜುನ್ ಜನ್ನಾ ಅವರ ಸ್ಟುಡಿಯೋದಲ್ಲಿ ನಾಯಕ ನಟ ಶರಣ್ ಅವರಿಗೆ ಇನ್ನೊಂದು ಸಂಗೀತ ಸಂಭ್ರಮ. ಇತ್ತೀಚಿಗೆ ತಮ್ಮದೇ ಅಭಿನಯದ ರಾಜರಾಜೇಂದ್ರ ಚಿತ್ರದಲ್ಲಿ ಮಧ್ಯಾಹ್ನ ಕನಸಿನಲ್ಲಿ ಎಂಬ ಹಾಡನ್ನು ಹಾಡಿದ್ದ ಶರಣ್, ಅದಾದ ನಂತರ ಶಿವರಾಜ್‌ಕುಮಾರ್ ಅಭಿನಯದ ವಜ್ರಕಾಯ ಚಿತ್ರಕ್ಕೂ ತಮ್ಮ ಕಂಠದ ಝಲಕ್ ತೋರಿಸಿದ್ದರು. ವಜ್ರಕಾಯ ಚಿತ್ರಕ್ಕಾಗಿ ತೂಕತುಗಡಬಡ ಎಂಬ ತೂಕದ ಹಾಡನ್ನೂ ಹಾಡಿದ್ದರು. ಅದು ಈಗಾಗಲೇ ಚಾರ್ಟ್ ಬಸ್ಟರ್ ಲಿಸ್ಟ್‌ನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಮತ್ತೊಮ್ಮೆ ಶರಣ್ ಸ್ಟಾರ್ ಸಿಂಗರ್ ಆಗಿರುವ ಸುದ್ದಿ ಇದು.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ 'ಬುಲೆಟ್ ಬಸ್ಯಾ' ಚಿತ್ರಕ್ಕಾಗಿ ಯೋಗರಾಜ್‌ಭಟ್ ಅವರು ಬರೆದಿರುವ 'ಕಾಲ್ ಕೇಜಿ ಕಡ್ಲೆಕಾಯ್ ಮೇಯ್ತಾ ಇದೆ ರೋಡಲ್ಲಿ ಪಾಸ್ ಆದ್ಲು ಕಣ್ಣ ಮುಂದೆ' ಎಂಬ ಹಾಡನ್ನು ಶರಣ್ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹರ್ಷ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶರಣ್, ಹರಿಪ್ರಿಯ, ಗಿರಿ ಗೋಧುಳಿ, ಪ್ರಶಾಂತ್ ಸಿದ್ದಿ, ಸಾಧುಕೋಕಿಲ, ರಮೇಶ್ ಭಟ್, ಗಿರಿಜಾ ಲೋಕೇಶ್, ಯತಿರಾಜ್ ಜಗ್ಗೇಶ್, ಮುನಿ, ನೀನಾಸಂ ಅಶ್ವಥ್, ತನ್ವೀರ್ ಮುಂತಾದವರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!