ನಟ ನಿರ್ದೇಶಕ ಕಮಲ ಹಾಸನ್ 
ಸಿನಿಮಾ ಸುದ್ದಿ

ಕಮಲ ಹಾಸನ್ ಅವರ ಮುಂದಿನ ಚಿತ್ರದ ತೆಲುಗು ಶೀರ್ಷಿಕೆ 'ಚೀಕಟಿ ರಾಜ್ಯಂ'

ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ನಟನೆಯ 'ಉತ್ತಮ ವಿಲನ್' ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಟ ನಿರ್ದೇಶಕ ಕಮಲ ಹಾಸನ್ ಈಗ ತಮಿಳು ಚಿತ್ರ

ಹೈದರಾಬಾದ್: ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ನಟನೆಯ 'ಉತ್ತಮ ವಿಲನ್' ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಟ ನಿರ್ದೇಶಕ ಕಮಲ ಹಾಸನ್ ಈಗ ತಮಿಳು ಚಿತ್ರ 'ತೂಂಗಾವಾನಮ್' ಚಿತ್ರದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಈ ಸಿನೆಮಾದ ಚಿತ್ರೀಕರಣ ಇಂದು ಪ್ರಾರಂಭವಾಗಲಿದ್ದು ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲೂ ಚಿತ್ರೀಕರಣಗೊಳ್ಳಲಿದೆ.

"ಈ ಚಿತ್ರದ ತೆಲಗು ಅವತರಿಣಿಕೆಯ ಶೀರ್ಷಿಕೆಯನ್ನು 'ಚೀಕಟಿ ರಾಜ್ಯಂ' ಎಂದಿಡಲಾಗಿದೆ. ಇದು ದ್ವಿಭಾಷಾ ಚಲನಚಿತ್ರ. ಇದರ ಮೊದಲ ನೋಟವನ್ನು ಭಾನುವಾರ ಅನಾವರಣಗೊಳಿಸಲಾಗುವುದು' ಎಂದು ಚಲನಚಿತ್ರ ಮೂಲಗಳಿಂದ ತಿಳಿದುಬಂದಿದೆ.

ಕಮಲ್ ಹಾಸನ್ ಅವರ ದೀರ್ಘ ಕಾಲದ ಗೆಳೆಯ ರಾಜೇಶ್ ಎಂ ಸೆಲ್ವಾ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತ್ರಿಶಾ ಕೃಷ್ಣನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಕಮಲ್ ಅವರ ಪತ್ನಿಯ ಪಾತ್ರಕ್ಕೆ ಮನಿಷಾ ಕೊಯಿರಾಲ ಅವರನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ. ಗಿಬ್ರಾನ್ ಸಂಗೀತ ನೀಡಲಿದ್ದು, ಕಮಲ್ ಸಿನೆಮಾಗೆ ಸಂಗೀತ ನಿರ್ದೇಶಿಸುತ್ತಿರುವುದು ಇದು ನಾಲ್ಕನೆಯ ಬಾರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT