ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ಜೊತೆ ಅರುಣ್ ವಿಜಯ್ ಫೈಟ್!

ಸರವಣನ್ ಅವರ ಮುಂಬರುವ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಅರುಣ್ ವಿಜಯ್ ತೆರೆಯ ಮೇಲೆ ಫೈಟ್ ಮಾಡಲಿದ್ದಾರೆ.

ಬೆಂಗಳೂರು: ಸರವಣನ್ ಅವರ ಮುಂಬರುವ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಅರುಣ್ ವಿಜಯ್ ತೆರೆಯ ಮೇಲೆ ಫೈಟ್ ಮಾಡಲಿದ್ದಾರೆ. ಸುಧೀರ್ಘ ಕಾಲದವರೆಗೆ ವಿರಾಮದಲ್ಲಿದ್ದ ಪುನೀತ್ ಈಗ ಇನ್ನು ಹೆಸರಿದ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಇವರ ಜೊತೆಗೆ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ತಮಿಳು ನಟ ಅರುಣ್ ವಿಜಯ್ ಕೂಡ ಸೇರಿಕೊಳ್ಳಲಿದ್ದಾರೆ.

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಚಿತ್ರಿಕರಣಗೊಳ್ಳಲಿರುವ ಈ ಫೈಟ್ ದೃಶ್ಯಾವಳಿ ಅತಿ ಹೆಚ್ಚು ವ್ಯಯಿಸಿರುವ ಫೈಟ್ಗಳಲ್ಲಿ ಒಂದೆನ್ನುವ ನಿರ್ದೇಶಕ "ಇದು ಪುನೀತ್ ಮತ್ತು ನಮ್ಮ ಚಿತ್ರದ ವಿಲನ್ ಅರುಣ್ ಅವರ ನಡುವಿನ ಫೈಟ್. ಈ ಆಕ್ಷನ್ ದೃಶ್ಯಾವಳಿಯನ್ನು ಫೈಟ್ ಮಾಸ್ಟರ್ ಸಿಲ್ವಾ ನಿರ್ದೇಶಿಸಲಿದ್ದಾರೆ. ಅವರು ತಮಿಳು ಸಿನೆಮಾಗಳಲ್ಲಿ ಹೆಸರುವಾಸಿ ಹಾಗು ಆಕ್ಷನ್ ಸ್ಟಂಟ್ ಗಳಿಗೆ ಮನೆಮಾತು" ಎನ್ನುತ್ತಾರೆ ಸರವಣನ್.

ಇಡೀ ಚಿತ್ರೀಕರಣ ನಗರದಲ್ಲೇ ನಡೆಯಲಿದೆ ಎನ್ನುವ ಸರವಣನ್ "ನಾನು ಕೆಲವು ಪ್ರದೇಶಗಳನ್ನು ಗುರುತಿಸಿದ್ದೇನೆ. ಅವುಗಳು ನನ್ನ ಸ್ಕ್ರಿಪ್ಟ್ ಗೆ ಸರಿ ಹೊಂದುತ್ತವೆ. ಒಂದೇ ಒಂದು ಹಾಡಿಗೆ ಮಾತ್ರ ವಿದೇಶಕ್ಕೆ ತೆರಳಲಿದ್ದೇವೆ. ಇದನ್ನು ಹೊರತುಪಡಿಸಿದರೆ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲೆ ನಡೆಯಲಿದೆ" ಎನ್ನುತ್ತಾರೆ.

ಇನ್ನು ಶೀರ್ಷಿಕೆ ಸಿಕ್ಕಿಲ್ಲ ಎನ್ನುವ ಸರವಣನ್ ಈ ಚಿತ್ರೀಕರಣ ೧೫ ದಿನಗಳ ವರೆಗೆ ಮುಂದುವರೆಯಲಿದೆ ಎಂದಿದ್ದಾರೆ. ನಂತರ ಪುನೀತ್ ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ