ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಮುಂಗಾರು ಮಳೆ-೨ ಚಿತ್ರತಂಡ 
ಸಿನಿಮಾ ಸುದ್ದಿ

ಮುಂಗಾರು ಮಳೆ -೨: ಆರು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ

ಮುಂಗಾರು ಮಳೆ ಈಗಾಗಲೇ ಅಪ್ಪಳಿಸಿರುವುದರಿಂದ ಮುಂಗಾರು ಮಳೆ -೨ ಪ್ರಾರಂಭಿಸುವುದಕ್ಕೆ ಇದಕ್ಕಿಂತಲೂ ಉತ್ತಮ ಸಮಯವುಂಟೆ!

ಬೆಂಗಳೂರು: ಮುಂಗಾರು ಮಳೆ ಈಗಾಗಲೇ ಅಪ್ಪಳಿಸಿರುವುದರಿಂದ ಮುಂಗಾರು ಮಳೆ -೨ ಪ್ರಾರಂಭಿಸುವುದಕ್ಕೆ ಇದಕ್ಕಿಂತಲೂ ಉತ್ತಮ ಸಮಯವುಂಟೆ! ಚಲನಚಿತ್ರಕ್ಕೆ ಹಾಡುಗಳ ರೆಕಾರ್ಡ್ ಕಾರ್ಯಕ್ರಮದ ಮೂಲಕ ಶಶಾಂಕ್ ಚಲನಚಿತ್ರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಚಲನಚಿತ್ರದ ಸಂಗೀತಕ್ಕೆ ಅರ್ಜುನ್ ಜನ್ಯ ಅವರನ್ನು ತಮ್ಮ ತಂಡಕ್ಕೆ ನಿರ್ದೇಶಕರು ಸೇರಿಸಿಕೊಂಡಿದ್ದಾರೆ. ನಿರ್ಮಾಪಕ ಜಿ ಗಂಗಾಧರ್, ನಟ ಗಣೇಶ್, ನಿರ್ದೇಶಕ ಮತ್ತಿತರು ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಶುಕ್ರವಾರ ಬೆಳಗ್ಗೆ ಸಣ್ಣ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ. ನಿರ್ದೇಶಕರ ಪ್ರಕಾರ ಚಿತ್ರದಲ್ಲಿ ಆರು ಹಾಡುಗಳು ಇರುತ್ತವಂತೆ. ಹಿಂದಿನ ಮುಂಗಾರು ಮಳೆಯ ಯಶಸ್ಸಿಗೂ ಪ್ರಮುಖ ಕಾರಣ ಮನೋಮೂರ್ತಿ ನೀಡಿದ್ದ ಸಂಗೀತ. ಇದು ಮರುಕಳಿಸಲಿ ಎಂಬುದು ಹಾರೈಕೆ.

ಈ ಚಲನಚಿತ್ರದಲ್ಲಿ ಖ್ಯಾತ ನಟ ರವಿಚಂದ್ರನ್ ಕೂಡ ನಟಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಶಶಾಂಕ್. ಮೂಲಗಳ ಪ್ರಕಾರ ಈ ಸಿನೆಮಾದಲ್ಲಿ ಅವರು ಗಣೇಶ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. "ನಾವು ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ನಮ್ಮ ಜೊತೆಗೆ ಬಂದರೆ ಬಹಳ ಸಂತೋಷವಾಗುತ್ತದೆ" ಎಂದಿದ್ದಾರೆ ಶಶಾಂಕ್. ಈ ಹಿಂದೆ ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಅವರ ತಂದೆಯ ಪಾತ್ರವನ್ನು ರವಿಚಂದ್ರನ್ ನಿರ್ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

SCROLL FOR NEXT