'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆ ಸಮಾರಂಭದಲ್ಲಿ ಸಾ ರಾ ಗೋವಿಂದು ಅವರಿಗೆ ಅಭಿನಂದನೆ 
ಸಿನಿಮಾ ಸುದ್ದಿ

ಶಿವಣ್ಣ ಕ್ರಿಕೆಟ್ ಆಟಗಾರನಾಗುತ್ತಾರೆ ಎಂದೆಣಿಸಿದ್ದೆ: ಸಾ ರಾ ಗೋವಿಂದು

ನಟ ಶಿವರಾಜ್ ಕುಮಾರ್ ನಟನಾಗುತ್ತಾರೆ ಎಂದು ನನಗನಿಸಿರಲಿಲ್ಲ ಬದಲಾಗಿ ಕ್ರಿಕೆಟ್ ಆಟಗಾನಾಗುತ್ತಾರೆ ಎಂದೆಣಿಸಿದ್ದೆ ಎಂದು ನಿರ್ಮಾಪಕ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷ

ಬೆಂಗಳೂರು: ನಟ ಶಿವರಾಜ್ ಕುಮಾರ್ ನಟನಾಗುತ್ತಾರೆ ಎಂದು ನನಗನಿಸಿರಲಿಲ್ಲ ಬದಲಾಗಿ ಕ್ರಿಕೆಟ್ ಆಟಗಾನಾಗುತ್ತಾರೆ ಎಂದೆಣಿಸಿದ್ದೆ ಎಂದು ನಿರ್ಮಾಪಕ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸಾ ರಾ ಗೋವಿಂದು ಹೇಳಿದ್ದಾರೆ.

ಸೋಮವಾರ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ಸಾ ರಾ ಗೋವಿಂದು ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಅವರು "ಅವರು ಕ್ರಿಕೆಟ್ ಆಟಗಾರರಾಗುತ್ತರೆ ಎಂದೇ ನಾನು ತಿಳಿದಿದ್ದೆ ನಟರಾಗುತ್ತಾರೆ ಎಂದಲ್ಲ. ಅವರು ಸಣ್ಣ ಹುಡುಗನಾಗಿದ್ದಾಗ ಇಲ್ಲಿ ಕ್ರಿಕೆಟ್ ಆಡಲು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದುದು ನನಗಿನ್ನೂ ನೆನಪಿದೆ. ಬ್ಯಾಟ್ ಮತ್ತು ಬಾಲಿನ ಆಟ ಎಂದರೆ ಅವರಿಗೆ ಹುಚ್ಚು. ಅವರು ಚೆನ್ನೈಗೆ ಹಿಂದಿರುಗುವಾಗ ತೆಗೆದುಕೊಂಡು ಹೋಗುತ್ತಿದ್ದ ಒಂದೇ ವಸ್ತುವೆಂದರೆ ಕ್ರಿಕೆಟ್ ಸೆಟ್" ಎಂದಿದ್ದಾರ ಗೋವಿಂದು.

ಸಾ ರಾ ಗೋವಿಂದು ಅವರಿಗೆ ಅಭಿನಂದನೆ ಸಲ್ಲಿಸಿದ ಶಿವರಾಜಕುಮಾರ್ ಕನ್ನಡ ಸಿನೆಮಾಗಳನ್ನು ಮಂಡಲಿಯಿಂದ ಉತ್ತೇಜಿಸಬೇಕೆಂಬುದಷ್ಟೇ ನನ್ನ ಒಂದು ಕೋರಿಕೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಯಶ್, ರಾಕ್ಲೈನ್ ವೆಂಕಟೇಶ್, ಸಂಚಾರಿ ವಿಜಯ್ ಮತ್ತು ಲಹರಿ ವೇಲು ಉಪಸ್ಥಿತರಿದ್ದರು. ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನವೆಂಬರ್ ೨೦ ರಂದು ಸಿನೆಮಾ ತೆರೆ ಕಾಣಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT