ಸಿನಿಮಾ ಸುದ್ದಿ

ದೀಪಾವಳಿಗೆ ರಾಮ್ ಲೀಲಾ ಬಿಡುಗಡೆ

Srinivas Rao BV

ಹೆಚ್ಚಿನ ಬಜೆಟ್ ನ ತ್ರಿಭಾಷಾ ಚಿತ್ರ ನಿರ್ದೇಶಕ ವಿಜಯ್ ಕಿರಣ್ ಪ್ರಥಮ ಚಿತ್ರವಾಗಬೆಕಿತ್ತಾದರೂ, ನಿರ್ಮಾಪಕರ ವಿಷಯದಿಂದ ತ್ರಿಬಾಷಾ ಚಿತ್ರದ ಯೋಜನೆ ಸ್ಥಗಿತಗೊಂಡಿದೆ. ಆದರೆ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿರುವ ರಾಮ್ ಲೀಲಾ ವಿಜಯ್ ಕಿರಣ್ ಅವರ ಪ್ರಥಮ ಚಿತ್ರವಾಗಲಿದೆ. 
ರಾಮ್ ಲೀಲಾ ತೆಲುಗು ಭಾಷೆಯ ಲೌಕ್ಯಂ ಚಿತ್ರದ ರೀಮೇಕ್ ಚಿತ್ರವಾಗಿದ್ದು, ಕೆಲವೊಂದು ಅಂಶಗಳನ್ನು ಲೌಕ್ಯಂ ನಿಂದಲೇ ಪಡೆಯಲಾಗಿದೆಯಾದರೂ ಕನ್ನಡದ ಸೊಗಡಿಗೆ ತಕ್ಕಂತ ಚಿತ್ರವನ್ನು ತಯಾರಿಸಲಾಗಿದೆ ಎಂದು ವಿಜಯ್ ಕಿರಣ್ ಹೇಳಿದ್ದಾರೆ.
ಚಿತ್ರರಂಗದಲ್ಲಿ ತಂತ್ರಜ್ಞನಾಗಿ, ಸೌಂದರ್ಯ ಜಗದೀಶ್ ಅವರ ನಿರ್ಮಾಣದಲ್ಲಿ ಸಹ ನಿರ್ಮಾಪಕನಾಗಿ ಕಾರ್ಯನಿರ್ವಹಿಸಿದ್ದೇನೆ, ನಿರ್ದೇಶನದ ವಿಷಯಕ್ಕೆ ಬಂದಕಗ ಮಿಥುನ್ ಚಕ್ರಬೋರ್ತಿ ಅವರ ಮಗ ಮಹಾಕ್ಷಯ್ ಚಕ್ರವರ್ತಿ, ಶ್ರೇಯಸ್ ತಲ್ಪಾಡೆ, ಪಿಯಾ ಬಾಜ್ಪೇಯಿ ಮತ್ತು ಶ್ರೀನಗರ ಕಿಟ್ಟಿ ಅವರನ್ನೊಳಗೊಂಡ ಬಹುಭಾಷಾ ಚಿತ್ರದ ಮೂಲಕವೇ ನಿರ್ದೇಶನಕ್ಕೆ ಎಂಟ್ರಿ  ನೀಡಬೇಕೆಂದು ಯೋಜಿಸಿದ್ದೆ.  ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
ಈ ಮಧ್ಯೆ ಲೌಕ್ಯಂ ಚಿತ್ರ ವೀಕ್ಷಿಸಿದ ನಂತರ ಅದನ್ನು ಕನ್ನಡದ ಪ್ರೇಕ್ಷಕರಿಗೆ ನೀಡಬೇಕೆಂದು, ರೀಮೇಕ್ ಮಾಡಿರುವುದಾಗಿ ವಿಜಯ್ ಕಿರಣ್ ತಿಳಿಸಿದ್ದಾರೆ. ರಾಮಲೀಲಾ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅಮೂಲ್ಯ ಜೋಡಿಯಾಗಿದ್ದು, ರಾಮಲೀಲಾದಂತಹ ಸಂಪೂರ್ಣ ಮನರಂಜನಾತ್ಮಕ ಚಿತ್ರವನ್ನು ಚಿರಂಜೀವಿ ಸರ್ಜಾ ಎಂದಿಗೂ ಯತ್ನಿಸಿಲ್ಲ. ಅಲ್ಲದೇ ಈ ಚಿತ್ರಕ್ಕೆ ಅಗತ್ಯವಿರುವ ನಾಯಕಿ ಪಾತ್ರಕ್ಕೆ ಅಮೂಲ್ಯ ಸೂಕ್ತ ಆಯ್ಕೆ ಎಂದು ವಿಜಯ್ ಕಿರಣ್ ತಿಳಿಸಿದ್ದಾರೆ.
ಜಾರ್ಜಿಯಾದ ಟಿಬಿಲಿಸಿ, ಬತುಮಿಯಲ್ಲಿ ರಾಮ್ ಲೀಲಾ ಚಿತ್ರದ ಹಾಡುಗಳನ್ನು ಚಿತ್ರೀಕರಿಸಲಾಗಿದ್ದು, ಶಿವರಾಜ್ ಕುಮಾರ್, ದರ್ಶನ್, ಗಣೇಶ್, ದ್ರುವಾ ಸರ್ಜಾ ಸೇರಿದಂತೆ ಹಲವು ನಾಯಕ ನಟರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೀಪಾವಳಿಗೆ ಬಿಡುಗಡೆಯಾಗಲಿರುವ ಏಕೈಕ ಚಿತ್ರ ರಾಮ್ ಲೀಲಾ ಅಗಿರಲಿದೆ ಎಂದು ವಿಜಯ್ ಹೇಳಿದ್ದಾರೆ. 
ವಿಜಯ್ ಅವರ ಮತ್ತೊಂದು ಮಹತ್ವಾಕಾಂಕ್ಷಿ ಬಹುಭಾಷೀಯ ಚಿತ್ರ 2016 ರಕ್ಕೆ ತೆರೆ ಕಾಣುವ ನಿರೀಕ್ಷೆ ಇದೆ. ಮೊದಲು ಅಣ್ಣಾಜಿ ನಾಗರಾಜ್ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದರು, ಈಗ ತಿಪ್ಪೇಸ್ವಾಮಿ ನಿರ್ಮಾಣದಲ್ಲಿ ಚಿತ್ರ ಮುಂದುವರೆದಿದೆ.

SCROLL FOR NEXT