ಬೆಂಗಳೂರು-೫೬೦೦೨೩ ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಈ ವಾರ ನಾಲ್ಕು ಕನ್ನಡ ಚಿತ್ರಗಳ ಬಿಡುಗಡೆ

ದೀಪಾವಳಿ ಹಬ್ಬದ ನಂತರವೂ ಕನ್ನಡ ಸಿನೆಮಾಗಳ ಹಬ್ಬ ಮುಂದುವರೆದಿದೆ. ಸಿನೆರಸಿಕರಿಗೆ ಖುಷಿತರಬಲ್ಲ ಸಂಗತಿಯೆಂದರೆ ಈ ವಾರ ನಾಲ್ಕು ಸಿನೆಮಾಗಳು ತೆರೆ ಕಾಣಲಿವೆ.

ಬೆಂಗಳೂರು: ದೀಪಾವಳಿ ಹಬ್ಬದ ನಂತರವೂ ಕನ್ನಡ ಸಿನೆಮಾಗಳ ಹಬ್ಬ ಮುಂದುವರೆದಿದೆ. ಸಿನೆರಸಿಕರಿಗೆ ಖುಷಿತರಬಲ್ಲ ಸಂಗತಿಯೆಂದರೆ ಈ ವಾರ ನಾಲ್ಕು ಸಿನೆಮಾಗಳು ತೆರೆ ಕಾಣಲಿವೆ.

ಆಕ್ಟೋಪಸ್: 'ವಾಸ್ಕೋಡಿಗಾಮ' ಮತ್ತು ತಮಿಳಿನ 'ತೂಂಗವಾನಮ್'ನಲ್ಲಿ ಕಿಶೋರ್ ಅವರನ್ನು ಕಂಡಿರುವ ನೆನಪು ಹಸಿಹಸಿಯಾಗಿರುವಾಗಲೇ ಈಗ ಕಿಶೋರ್ ನಾಯಕನಟನಾಗಿ ನಟಿಸಿರುವ 'ಆಕ್ಟೋಪಸ್' ಗುರುವಾರ ಬಿಡುಗಡೆಗೆ ಸಿದ್ಧವಾಗಿದೆ. ಯಜ್ಞಾ ಶೆಟ್ಟಿ ನಾಯಕ ನಟಿಯಾಗಿದ್ದು ನಿರ್ದೇಶನ ಪಿ ಅಣ್ಣಯ್ಯನವರದ್ದು.

ಬಾಕ್ಸರ್: ನಟ ಧನಂಜಯ್ ಅವರು ಕನ್ನಡದಲ್ಲಿ ಯಶಸ್ಸು ಕಾಣುತ್ತಿರುವ ಯುವನಟ. ದೃಶ್ಯಂ ಹುಡುಗಿ ಎಂದೇ ಖ್ಯಾತರಾದ ಕೃತಿಕಾ ಸಹನಟಿ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕಾ ಹರಿಕೃಷ್ಣ ಅವರ ಸಂಗೀತವಿದೆ. ಶುಕ್ರವಾರದಿಂದ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಬೆಂಗಳೂರು-೫೬೦೦೨೩: ಕಿರುತೆರೆಯಲ್ಲಿ ಹೆಸುರುವಾಸಿ ಕಾರ್ತಿಕ್ ಜಯರಾಂ (ಜೆಕೆ) ಬೆಳ್ಳಿತೆರೆಯಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. 'ಕಿರಾತಕ'  ನಿರ್ದೇಶಕ ಪ್ರದೀಪ್ ರಾಜ್ ನಿರ್ದೇಶನದಲ್ಲಿ ಈಗ ಜೆಕೆ ಮತ್ತೆ ಬೆಳ್ಳಿತೆರೆಗೆ ಬಂದಿದ್ದಾರೆ. ಚೆನ್ನೈ-600028 ಸಿನೆಮಾದ ರಿಮೇಕ್ ಇದು. ಈ ಚಿತ್ರವಾದರೂ ಜೆಕೆಗೆ ಬೆಳ್ಳಿತೆರೆಯಲ್ಲಿ ಭವಿಷ್ಯ ದೊರಕಿಸಿಕೊಡುವುದೇ?

ಮಾಮು ಟಿ ಅಂಗಡಿ: ಹೊಸಬರ ಪಡೆ ಕಟ್ಟಿಕೊಂಡು ಚಿತ್ರ ನಿರ್ದೇಶಿಸಿರುವ ಪರಮೇಶ್ ಅತಿಥಿ ನಟರಾಗಿ ನಟಿಸಲು ಶ್ರೀನಗರ ಕಿಟ್ಟಿ, ಅಜಯ್ ರಾವ್ ಮತ್ತು ಪ್ರೇಮ್ ಇವರನ್ನು ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ರಿಲೀಸ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT