Killing Veerappan, Shivalinga Eyeing The Same Release Date? 
ಸಿನಿಮಾ ಸುದ್ದಿ

ಕಿಲ್ಲಿಂಗ್ ವೀರಪ್ಪನ್, ಶಿವಲಿಂಗ ಒಂದೇ ದಿನ ಬಿಡುಗಡೆ?

ಪಿ ವಾಸು ನಿರ್ದೇಶನದ, ಶಿವರಾಜಕುಮಾರ್ ನಟನೆಯ 'ಶಿವಲಿಂಗ' ಟ್ರೇಲರ್ ಸೋರಿಕೆಯಾಗಿದ್ದು ಇದು ಹಾರರ್ ಥ್ರಿಲ್ಲರ್ ಎಂದೇ ಊಹಿಸಲಾಗಿದೆ. ನಾಯಕ ನಟಿಯಾಗಿ ವೇದಿಕಾ ಅಭಿನಯಿಸಿದ್ದು

ಬೆಂಗಳೂರು: ಪಿ ವಾಸು ನಿರ್ದೇಶನದ, ಶಿವರಾಜಕುಮಾರ್ ನಟನೆಯ 'ಶಿವಲಿಂಗ' ಟ್ರೇಲರ್ ಸೋರಿಕೆಯಾಗಿದ್ದು ಇದು ಹಾರರ್ ಥ್ರಿಲ್ಲರ್ ಎಂದೇ ಊಹಿಸಲಾಗಿದೆ. ನಾಯಕ ನಟಿಯಾಗಿ ವೇದಿಕಾ ಅಭಿನಯಿಸಿದ್ದು ಶಿವರಾಜ್ ಕುಮಾರ್ ಅವರನ್ನು 'ಬಾಂಡ್-ಜೇಮ್ಸ್ ಬಾಂಡ್' ಎಂದು ಪರಿಚಯಿಸುತ್ತಿರುವುದನ್ನು ಟ್ರೇಲರ್ ನಲ್ಲಿ ಕಾಣಲಾಗಿದೆ.

ಟ್ರೇಲರ್ ಸೋರಿಕೆಯಾಗಿರುವುದಕ್ಕೆ ಅಸಮಧಾನ ತೋರಿರುವ ನಿರ್ಮಾಪಕ ಕೆ ಎ ಸುರೇಶ್ "ಇದು ಐದು ದಿನದ ಹಿಂದೆಯೇ ಆಗಿದೆ ಆದರ ನಮ್ಮ ಗಮನಕ್ಕೆ ಬಂದಿದ್ದು ಎರಡು ದಿನಗಳ ಹಿಂದೆ. ಈ ಅನೈತಿಕ ಕೆಲಸ ಯಾರು ಮಾಡಿರುವುದು ಎಂದು ತಿಳಿಯಲು ವಿಚಾರಣೆ ನಡೆಸಲಾಗುತ್ತಿದೆ" ಎನ್ನುತ್ತಾರೆ ನಿರ್ಮಾಪಕ.

ಆದರೆ ಮುಂದಿನ ವಾರ ಅಧಿಕೃತವಾಗಿ ಟ್ರೇಲರ್ ಬಿಡುಗಡೆಯಾಗಲಿದೆ ಎನ್ನುತಾರೆ ನಿರ್ಮಾಪಕ. "ಶುಕ್ರವಾರ ಆಡಿಯೋ ಬಿಡುಗಡೆ ಮಾಡಲಿದ್ದೇವೆ ನಂತರ ಟ್ರೇಲರ್. ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಸೆನ್ಸಾರ್ ಮುಂದೆ ಹೋಗಲಿದ್ದೇವೆ" ಎಂದಿದ್ದಾರೆ.

ಮೊದಲಿನ ಯೋಜನೆಯಂತೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ನವೆಂಬರ್ ನಲ್ಲಿ ಮತ್ತು ಶಿವಲಿಂಗ ಡಿಸೆಂಬರ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಈಗ ಕಿಲ್ಲಿಂಗ್ ವೀರಪ್ಪನ್ ತಡವಾಗುತ್ತಿದ್ದು ಎರಡು ಸಿನೆಮಾಗಳು ಒಂದೇ ದಿನ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. "ನಾನು 'ಕಿಲ್ಲಿಂಗ್ ವೀರಪ್ಪನ್' ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಮೊದಲೇ ನಿಶ್ಚಿತವಾದಂತೆ ನಾವಂತೂ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ ಸುರೇಶ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!