'ಜಗ್ಗು ದಾದ' ನಟ ದರ್ಶನ್ 
ಸಿನಿಮಾ ಸುದ್ದಿ

ಚೇತರಿಸಿಕೊಂಡು ಕೆಲಸಕ್ಕೆ ಮರಳಿದ ದರ್ಶನ್

ಪೆಟ್ಟಿನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ನಟ ದರ್ಶನ್ ಈಗ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಿಂದಿರುಗಿರುವುದರಿಂದ 'ಜಗ್ಗು ದಾದ' ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕೆ ನಟ 'ವಿರಾಟ್'

ಬೆಂಗಳೂರು: ಪೆಟ್ಟಿನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ನಟ ದರ್ಶನ್ ಈಗ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಹಿಂದಿರುಗಿರುವುದರಿಂದ 'ಜಗ್ಗು ದಾದ' ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕೆ ನಟ 'ವಿರಾಟ್' ಸಿನೆಮಾದ ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದು, ಮುಂದೂಡಲಾಗಿದ್ದ 'ಜಗ್ಗು ದಾದ' ಚಿತ್ರೀಕರಣಕ್ಕೆ ಮರಳಲಿದ್ದಾರೆ.

"ನಾನು 'ವಿರಾಟ್' ಸಿನೆಮಾದ ಮೊದಲಾರ್ಧದ ಡಬ್ಬಿಂಗ್ ಮಂಗಳವಾರ ಮುಗಿಸಲಿದ್ದೇನೆ. ಇನ್ನು ಕಾಯಲು ಸಾಧ್ಯವಿಲ್ಲ ಆದುದರಿಂದ ಜಗ್ಗು ದಾದ ತಂಡಕ್ಕೆ ಡಿಸೆಂಬರ್ ೧ ರಿಂದ ಶೂಟ್ ಮಾಡಲು ಸಿದ್ಧರಾಗಿರುವಂತೆ ಹೇಳಿದ್ದೇನೆ" ಎಂದು ದಶನ್ ಹೇಳಿದ್ದಾರೆ.

ವೈದ್ಯರು ಎಡಗೈಗೆ ಹೆಚ್ಚು ಒತ್ತಡ ಹೇರದಂತೆ ವಿಶ್ರಾಂತಿ ನೀಡಲು ಸಲಹೆ ನೀಡಿದ್ದರೂ ಹಾಸಿಗೆಯಲ್ಲಿ ಸದಾ ಮಲಗಿರಲು ಸಾಧ್ಯವಿಲ್ಲ ಎನ್ನುತ್ತಾರೆ ದರ್ಶನ್. "ನನಗೆ ಸಾಕಾಗಿ ಹೋಗಿದೆ. ನನ್ನ ಜೀವನಶೈಲಿಯಲ್ಲಿ ಯಾವಾಗಲು ಬ್ಯುಸಿಯಾಗಿರಲು ಬಯಸುತ್ತೇನೆ. ನಾನು ಸಾಮಾನ್ಯವಾಗಿ ಬೆಳಗ್ಗೆ ೫:೩೦ಕ್ಕೆ ಎದ್ದು ಜಿಮ್ಮಿಗೆ ಹೋಗಿ ನಂತರ ಚಿತ್ರೀಕರಣಕ್ಕೆ ತೆರಳುತ್ತೇನೆ. ಆದರೆ ಈ ಪೆಟ್ಟಿನಿಂದ ಸೋಮಾರಿಯಾಗುವುದರ ದುಷ್ಪರಿಣಾಮಗಳು ತಿಳಿಯಿತು" ಎನ್ನುತಾರೆ.

ಈ ವಿಶ್ರಾಂತಿಯಿಂದಾದ ಒಂದೇ ಒಳ್ಳೆಯ ಸಂಗತಿಯೆಂದರೆ ಗಡ್ಡ ಬೆಳೆಸಿದ್ದು ಎನ್ನುವ ದರ್ಶನ್ 'ಜಗ್ಗು ದಾದ' ಸಿನೆಮಾಗೆ ಈ ಲುಕ್ಸ್ ಬೇಕಾಗಿತ್ತು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT