ಸಿನಿಮಾ ಸುದ್ದಿ

ಹುಚ್ಚ ವೆಂಕಟ್ ನಿರ್ಗಮನದ ನಂತರ ಹೆಚ್ಚಾಯ್ತು ಬಿಗ್‍ಬಾಸ್ ವೀಕ್ಷಕರ ಸಂಖ್ಯೆ

Vishwanath S
ಬೆಂಗಳೂರು: ಕೆಲ ವಾರಗಳ ಹಿಂದೆ ಹುಚ್ಚಾ ವೆಂಕಟನ ಅಬ್ಬರ ಎಷ್ಟು ಜೋರಾಗಿತ್ತು ಅಂದರೆ ಯಾರ ಬಾಯಲ್ಲಿ ಆಗಲಿ ಹುಚ್ಚನ ಡೈಲಾಗ್‌ಗಳೇ... ಬಿಗ್‍ಬಾಸ್ ಮನೆಯಲ್ಲಿ ಹುಚ್ಚಾ ವೆಂಕಟನ ಹುಚ್ಚಾಟದಿಂದ ಟಿಆರ್‍ಪಿ ಹೆಚ್ಚಿತ್ತು ಅಂತ ತಿಳಿದರೆ ಅದು ಹೀಗ ಭ್ರಮನಿರಸನ.
ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ಆಫ್ ಇಂಡಿಯಾ(ಬಾರ್ಕ್) ಅಂಕಿ ಅಂಶಗಳ ಪ್ರಕಾರ ಹುಚ್ಚ ವೆಂಕಟ್ ಜನಪ್ರಿಯತೆ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದೆ ಅಂದರೆ ತಪ್ಪಾಗಲಾರದು. ಟಿವಿ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಅಳೆಯುವ ಬಾರ್ಕ್ ನೀಡುತ್ತಿರುವ ಅಂಕಿ–ಅಂಶಗಳ ಪ್ರಕಾರ ಹುಚ್ಚಾ ವೆಂಕಟ್ ನಿರ್ಗಮನದ ನಂತರ ಬಿಗ್ ಬಾಸ್ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ.
ಬಿಗ್ ಬಾಸ್ ರಿಯಾಲಿಟಿ ಶೋನ ಮೂರನೇ ಆವೃತಿ ಕಲರ್ಸ್ ಕನ್ನಡ ಟಿವಿ ಚಾನೆಲ್‌ ನಲ್ಲಿ ಪ್ರಸಾರವಾಗುತ್ತಿದ್ದು, ಉದ್ದಟತನ ಪ್ರದರ್ಶಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ವೆಂಕಟ್ ಮನೆಯಲ್ಲಿ ಇದ್ದದ್ದು ಮೂರು ವಾರ. 
ಮೊದಲ ವಾರ ಈ ಕಾರ್ಯಕ್ರಮವನ್ನು ಪ್ರತಿದಿನ ಸರಾಸರಿ 29.99 ಲಕ್ಷ ಮಂದಿ ವೀಕ್ಷಿಸಿದರೇ, ಎರಡನೇ ವಾರ ಈ ಸಂಖ್ಯೆ 28.21 ಲಕ್ಷಕ್ಕೆ ಕುಸಿದಿತ್ತು. ಮೂರನೇ ವಾರ ಸ್ವಲ್ಪ ಚೇತರಿಕೆಯೊಂದಿಗೆ 28.44 ಲಕ್ಷಕ್ಕೆ ಏರಿತ್ತು. ಮೂರನೇ ವಾರದಲ್ಲೇ ಸಹ ಸ್ಪರ್ಧಿ ಮೂರೂರು ರವಿ ಮೇಲೆ ಹಲ್ಲೆ ನಡೆಸಿದ್ದ ವೆಂಕಟ್ ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆಗಿದ್ದರು. ವೆಂಕಟ್ ನಿರ್ಗಮನದ ನಂತರದ ನಾಲ್ಕನೇ ವಾರ ಪ್ರತಿದಿನದ ಸರಾಸರಿ ವೀಕ್ಷಕರ ಸಂಖ್ಯೆ 32.94 ಲಕ್ಷಕ್ಕೆ ಏರಿದೆ.
SCROLL FOR NEXT