'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ಸೂರಜ್ ಗೌಡ, ಅಮೂಲ್ಯ 
ಸಿನಿಮಾ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ 'ಮದುವೆಯ ಮಮತೆಯ ಕರೆಯೋಲೆ' ಆಡಿಯೋ ಬಿಡುಗಡೆ

ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮ ವೀಕ್ಷಕರಿಗೆ ಈ ವಾರಾಂತ್ಯ ಡಬಲ್ ಧಮಾಕ. ತೂಗೂದೀಪ್ ಪ್ರೊಡಕ್ಷನ್ ನಿರ್ಮಾಣದ, ಕವಿರಾಜ್ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ'

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮ ವೀಕ್ಷಕರಿಗೆ ಈ ವಾರಾಂತ್ಯ ಡಬಲ್ ಧಮಾಕ. ತೂಗೂದೀಪ್ ಪ್ರೊಡಕ್ಷನ್ ನಿರ್ಮಾಣದ, ಕವಿರಾಜ್ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಬಿಗ್ ಬಾಸ್ ಮನೆಯಲ್ಲಿ ಬಿಡುಗಡೆಯಾಗಲಿದೆ. "ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ನಮ್ಮ ಸಿನೆಮಾ ಚಾಲನೆಯಾಗಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಆಡಿಯೋ ಬಿಡುಗಡೆ ನಡೆಯುತ್ತಿದೆ. ಇದು ಸುದೀಪ್ ಅವರ ಐಡಿಯಾ ಮತ್ತು ಆಡಿಯೋ ಬಿಡುಗಡೆಗೆ ಇದು ಒಳ್ಳೆಯ ವೇದಿಕೆ ಆದುದರಿಂದ ಒಪ್ಪಿಕೊಂಡೆವು ಎನ್ನುತ್ತಾರೆ ನಿರ್ಮಾಪಕ ದಿನಕರ್ ತೂಗುದೀಪ್.

ಈ ಒಂದು ಘಂಟೆಯ ಕಾರ್ಯಕ್ರಮದಲ್ಲಿ ಹಾಡುಗಳ ಕೆಲವು ದೃಶ್ಯಗಳನ್ನು ಬಿತ್ತರಿಸಲಾಗುವುದು ಹಾಗೆಯೇ ನಾಯಕ ಸೂರಜ್ ಗೌಡ ಮತ್ತು ಅಮೂಲ್ಯ ಅವರ ನೃತ್ಯ ಕಾರ್ಯಕ್ರಮ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಕಾರ್ಯಕ್ರಮ ಕೂಡ ಇರುತ್ತದೆ. ಕಾರ್ಯಕ್ರಮದಲ್ಲಿ ಅನಂತ್ ನಾಗ್ ಕೂಡ ಭಾಗವಹಿಸಲಿದ್ದಾರಂತೆ. "ಸೋಮವಾರದಿಂದ ಹಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ" ಎನ್ನುತ್ತಾರೆ ದಿನಕರ್.

ಗೀತರಚನಕಾರರಿಂದ ನಿರ್ದೇಶಕನಾಗಿ ಭಡ್ತಿ ಪಡೆದಿರುವ ಕವಿರಾಜ್ ಚೊಚ್ಚಲ ಬಾರಿಗೆ ತಮ್ಮ ನಿರ್ದೇಶನ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿದ್ದಾರೆ. ಸೂರಜ್ ಗೌಡ, ಅಮೂಲ್ಯ ಅನಂತನಾಗ್ ಇವರುಗಳಲ್ಲದೆ ಅಚ್ಯುತ್ ಕುಮಾರ್, ಚಿತ್ರ ಶೆಣಾಯ್, ಸಂಗೀತಾ, ಶಾಲಿನಿ ಕೂಡ ನಟಿಸಿದ್ದಾರೆ. ಹೊಸ ವರ್ಷಕ್ಕೆ ಸಿನೆಮಾ ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ದಿನಕರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT