ಹೊಸ ಇನ್ನಿಂಗ್ಸ್ ಆರಂಭಿಸಿದ RCB ಮಾಜಿ ಆಟಗಾರ; ತಮ್ಮ ಬಹುಕಾಲದ ಗೆಳತಿ ಕೈ ಹಿಡಿದ ಸ್ಫೋಟಕ ಬ್ಯಾಟರ್!

ಕ್ರಿಕೆಟಿಗ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅದ್ಧೂರಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಸೇರಿದಂತೆ ಅವರ ಸಹ ಆಟಗಾರರು ಮತ್ತು ಅಭಿಮಾನಿಗಳಿಂದ ಅಭಿನಂದಿಸುವ ಸಂದೇಶಗಳು ಹರಿದು ಬರುತ್ತಿವೆ.
England all-rounder Liam Livingstone has married his longtime girlfriend
ಲಿಯಾಮ್ ಲಿವಿಂಗ್‌ಸ್ಟೋನ್ - ಒಲಿವಿಯಾ
Updated on: 

ಆರ್ ಸಿಬಿ ಸ್ಫೋಟಕ ಬ್ಯಾಟರ್ ಹಾಗೂ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಅಕ್ಟೋಬರ್ 3, 2026 ರಂದು ಸ್ಪೇನ್‌ನ ಮಲ್ಲೋರ್ಕಾದ ಡೀಯಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಲಿವಿಂಗ್‌ಸ್ಟೋನ್ ಅವರು ತಮ್ಮ ದೀರ್ಘಕಾಲದ ಗೆಳತಿ ಒಲಿವಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕ್ರಿಕೆಟಿಗ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅದ್ಧೂರಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಸೇರಿದಂತೆ ಅವರ ಸಹ ಆಟಗಾರರು ಮತ್ತು ಅಭಿಮಾನಿಗಳಿಂದ ಅಭಿನಂದಿಸುವ ಸಂದೇಶಗಳು ಹರಿದು ಬರುತ್ತಿವೆ.

England all-rounder Liam Livingstone has married his longtime girlfriend
'ದೆಹಲಿ ಪೊಲೀಸರು ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲಿ': ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಪೋಸ್ಟ್ ವೈರಲ್​!

2025ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಮದುವೆ ಪ್ಲಾನ್ ಕೊನೆಯ ಕ್ಷಣದಲ್ಲಿ ಹಲವು ಬದಲಾವಣೆ ಕಂಡಿದೆ. ಹವಾಮಾನ ವೈಪರಿತ್ಯದಿಂದ ಲಿಯಾಮ್ ಲಿವಿಂಗ್‌ಸ್ಟೋನ್ ಮದುವೆ ಕೊನೆ ಕ್ಷಣದಲ್ಲಿ ಸ್ಥಳ, ದಿನಾಂಕಗಳನ್ನು ಬದಲಿಸಲಾಗಿತ್ತು. ಸ್ಪೇನ್‌ನ ಡಿಯಾ ಮಲ್ಲೋರ್ಕಾದಲ್ಲಿ ಮದುವೆಯಾಗಿದ್ದಾರೆ. ಲಿಯಾಮ್ ಹಾಗೂ ಒಲಿವಿಯಾ ಪ್ಲಾನ್ ಪ್ರಕಾರ ಮದುವೆ ಸಮಾರಂಭ ಆಯೋಜಿಸಲು ಸಾಧ್ಯವಾಗಿಲ್ಲ. ಆದರೂ ಲಿವಿಂಗ್‌ಸ್ಟೋನ್ ಇದನ್ನು ತಮ್ಮ ಜೀವನದ ಅತ್ಯುತ್ತಮ ದಿನ ಎಂದು ಕರೆದಿದ್ದಾರೆ.

ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಮೊದಲು ಲಿವಿಂಗ್‌ಸ್ಟೋನ್ ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡವನ್ನು ಪ್ರತಿನಿಧಿಸಿದ್ದರು.

X
Kannada Prabha
www.kannadaprabha.com