'ನೀರ್ ದೋಸೆ' ನಟಿ ಹರಿಪ್ರಿಯ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ 
ಸಿನಿಮಾ ಸುದ್ದಿ

'ನೀರ್ ದೋಸೆ'ಗೆ ಬೆಲ್ಲಿ ಡ್ಯಾನ್ಸ್ ಕಲಿಯಲಿರುವ ಹರಿಪ್ರಿಯ

ನೆಗುದಿಗೆ ಬಿದ್ದಿದ್ದ 'ನೀರ್ ದೋಸೆ' ಸಿನೆಮಾ ಮತ್ತೆ ಜೀವ ಪಡೆದು ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು, ಅಕ್ಟೋಬರ್ ೨೬ ರಿಂದ ಎರಡನೇ ಹಂತದ

ಬೆಂಗಳೂರು: ನೆನೆಗುದಿಗೆ ಬಿದ್ದಿದ್ದ 'ನೀರ್ ದೋಸೆ' ಸಿನೆಮಾ ಮತ್ತೆ ಜೀವ ಪಡೆದು ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು, ಅಕ್ಟೋಬರ್ ೨೬ ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

"ನಾವು ಇನ್ನೂ ಮುಂಚಿತವಾಗಿಯೇ ಚಿತ್ರೀಕರಣ ಪ್ರಾರಂಭಿಸಬೇಕಿತ್ತು ಆದರೆ ಜಗ್ಗೇಶ್ ದೇಶದಲ್ಲಿಲ್ಲ ಮತ್ತು ಅವರು ಅಕ್ಟೋಬರ್ ೨೦ ರಂದು ಹಿಂದಿರುಗಲಿದ್ದಾರೆ. ಈ ಹಿರಿಯ ನಟ ಮಹತ್ವದ ಪಾತ್ರವೊಂದನ್ನು ನಿರ್ವಹಿಸುತ್ತಿರುವುದರಿಂದ ಅವರಿಲ್ಲದೆ ಮುಂದುವರೆಯಲು ಸಾಧ್ಯವಿಲ್ಲ. ಜಗ್ಗೇಶ್ ಜೊತೆ ಹರಿಪ್ರಿಯ, ದತ್ತಣ್ಣ ಮತ್ತು ಸುಮನ್ ರಂಗನಾಥ್ ಕೂಡ ಸೇರಿಕೊಳ್ಳಲಿದ್ದಾರೆ" ಎಂದು ವಿವರಿಸುತ್ತಾರೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ವಿಜಯ್ ಪ್ರಸಾದ್.

ಈ ಮಧ್ಯೆ ಸಿನೆಮಾಗಾಗಿ ಹರಿಪ್ರಿಯ 'ಬೆಲ್ಲಿ ಡ್ಯಾನ್ಸ್' ಕಲಿಯಲಿದ್ದಾರಂತೆ. "ಈಗಾಗಲೇ ಇಬ್ಬರು ನೃತ್ಯಗಾರರನ್ನು ಪಟ್ಟಿ ಮಾಡಿದ್ದೇವೆ. ಅವರಲ್ಲಿ ಒಬ್ಬರು ಹರಿಪ್ರಿಯಾ ಅವರಿಗೆ ಬೆಲ್ಲಿ ಡ್ಯಾನ್ಸ್ ತರಬೇತಿ ನೀಡಲಿದ್ದಾರೆ" ಎಂದು ಕೂಡ ಅವರು ತಿಳಿಸುತ್ತಾರೆ.

ಸಿನೆಮಾವನ್ನು ಡಿಸೆಂಬರ್ ಸಮಯದಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!