ಸಿನಿಮಾ ಸುದ್ದಿ

ಅಮೆರಿಕಾದ ಸಿನೆಮಾದಲ್ಲಿ ಹಿಂದು ದೇವತೆಗಳು ಸೂಪರ್ ಹೀರೋಗಳು

Guruprasad Narayana

ನವದೆಹಲಿ: ಅಮೆರಿಕಾದ ಸಿನೆಮಾ ನಿರ್ಮಾಣ ಸಂಸ್ಥೆ 'ಡಿಸ್ನಿ-ಪಿಕ್ಸಾರ್' ನಿರ್ಮಿಸುತ್ತಿರುವ 'ಸಂಜಯ್ಸ್ ಸೂಪರ್ ಟೀಮ್' ಶಾರ್ಟ್ ಸಿನೆಮಾದಲ್ಲಿ ಹಿಂದು ದೇವರುಗಳು ಸೂಪರ್ ಹೀರೋಗಳಾಗಿ ಕಾಣಿಸಿಕೊಳ್ಳಲಿವೆ. ಈ ಸಿನೆಮಾ ಭಾರತದಲ್ಲಿ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

ಸಂಜಯ್ ಪಟೇಲ್ ನಿರ್ದೇಶನದ 'ಸಂಜಯ್ಸ್ ಸೂಪರ್ ಟೀಮ್' ಸಿನೆಮಾ ಹಿಂದೂ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಂತೆ.

ಈ ಆನಿಮೇಶನ್ ಸಿನೆಮಾದಲ್ಲಿ, ಅಮೇರಿಕಾದಲ್ಲಿ ಹುಟ್ಟಿ ಬೆಳೆಯುವ ಬಾಲಕನ ಹೇಗೆ ಪಶ್ಚಿಮ ದೇಶಗಳ ಪಾಪ್ ಸಂಸ್ಕೃತಿ ಮತ್ತು ಪೋಷಕರ ಸಂಪ್ರದಾಯಗಳ ನಡುವೆ ಸಿಕ್ಕಿಹಕಿಕೊಳ್ಳುತ್ತಾನೆ ಎಂಬ ನಿರ್ದೇಶಕನ ಸ್ವಾಗತ ಕಥೆ ಹೊಂದಿದೆಯಂತೆ.

ಇನ್ನೂ ಸರಳವಾಗಿ ಹೇಳುವುದಾದರೆ, ಕಾರ್ಟೂನ್ ಮತ್ತು ಕಾಮಿಕ್ ಲೋಕದಲ್ಲಿ ಮುಳುಗಿರುವ ಬಾಲಕನನ್ನು ಹಿಂದು ಸಂಪ್ರದಾಯದೆಡೆಗೆ ಪೋಷಕರು ಎಳೆಯಲು ಪ್ರಯತ್ನಿಸಿದಾಗ ಆಗುವ ಅನುಭವಗಳನ್ನು ಸಿನೆಮಾ ಹೊಂದಿದೆಯಂತೆ.

ಪಟೇಲ್ ಅವರು ಈ ಹಿಂದೆ 'ಮಾನ್ಸ್ಟರ್ಸ್ ಇಂಕ್', 'ದ ಇನ್ಕ್ರೆಡಿಬಲ್ಸ್' ಮತ್ತು 'ಟಾಯ್ ಸ್ಟೋರಿ-೨' ಸಿನೆಮಾಗಳಿಗೆ ಸ್ಟೋರಿಬೋರ್ಡ್ ಮಾಡಿದ್ದರು.

'ದ ಗುಡ್ ಡೈನೋಸಾರ್' ಸಿನೆಮಾದೊಂದಿಗೆ 'ಸಂಜಯ್ಸ್ ಸೂಪರ್ ಟೀಮ್' ಡಿಸೆಂಬರ್ ೪ ರಂದು ಬಿಡುಗಡೆಯಾಗಲಿದೆ.

SCROLL FOR NEXT