ಹೆಬ್ಬುಲಿ 
ಸಿನಿಮಾ ಸುದ್ದಿ

ಸುದೀಪ್ ರ ಹೆಬ್ಬುಲಿ ಚಿತ್ರಕ್ಕೆ ದೇವಿಶ್ರೀ ಅಲ್ಲ, ಅರ್ಜುನ್ ಜನ್ಯ ಸಂಗೀತ

ಸ್ಯಾಂಡಲ್‌ವುಡ್ ನಟ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶನ ಮಾಡುತ್ತಾರೆಂಬ...

ಸ್ಯಾಂಡಲ್‌ವುಡ್ ನಟ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶನ ಮಾಡುತ್ತಾರೆಂಬ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಚಿತ್ರಕ್ಕೆ ಕನ್ನಡದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎಂದು ಚಿತ್ರದ ನಿರ್ದೇಶಕ ಎಸ್, ಕೃಷ್ಣ ಅವರು ಹೇಳಿದ್ದಾರೆ.
ಸುದೀಪ್ ಅಭಿನಯದ ರನ್ನ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರೇ ಹೆಬ್ಬುಲಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕನ್ನಡದಲ್ಲಿ ಮುಂಚೂಣಿಯಲ್ಲಿರುವ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಈ ಕುರಿತಂತೆ ಮಾತನಾಡಿರುವ ಅರ್ಜುನ್ ಜನ್ಯ ಹೆಬ್ಬುಲಿ ಚಿತ್ರದ ಕಥೆ ವಿಭಿನ್ನವಾಗಿದೆ. ಈ ಚಿತ್ರ ಸುದೀಪ್ ಅವರಿಗೆ ಹೊಸದೊಂದು ಆಯಾಮವನ್ನು ನೀಡುತ್ತದೆ. ಸದ್ಯ ಚಿತ್ರದ ಕಥೆಗೆ ತಕ್ಕಂತೆ ಮ್ಯೂಸಿಕ್ ಕಂಪೋಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. 
ಸುದೀಪ್ ಅವರು ಸ್ಟಾರ್ ಗಿರಿ ತೋರಿಸುವಂತ ಸಂಗೀತ ನೀಡುವಂತೆ ಎಂದು ಕೇಳಿಲ್ಲ. ಚಿತ್ರಕ್ಕೆ ಸೂಕ್ತವಾದ ಹಾಡುಗಳನ್ನು ಅವರು ಅಪೇಕ್ಷಿಸುತ್ತಾರೆ. ಅದೇ ರೀತಿ ಹೆಬ್ಬುಲಿ ಚಿತ್ರಕ್ಕೆ ಈ ಬಾರಿ ಹೊಸ ಆಯಾಮ ಸೃಷ್ಠಿಸುವಂತಾ ಸಂಗೀತ ನೀಡುತ್ತೇವೆ. ಅದು ಸುದೀಪ್ ಅಭಿಮಾನಿಗಳು ಹಾಗೂ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತದೆ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಚಿತ್ರದ ಪ್ರೋಮೋ ವಿಭಿನ್ನವಾಗಿ ಮಾಡಲು ನಿರ್ದೇಶಕ ಕೃಷ್ಣ ಹಾಗೂ ಬಹಳ ಶ್ರಮಿಸಿದ್ದೇವೆ. ಪ್ರೋಮೋಗಾಗಿ ನಿರ್ದೇಶಕರು ಹೆಚ್ಚಿನ ಸಮಯ ನೀಡಿದ್ದಾರೆ ಹೀಗಾಗಿ ಚಿತ್ರದ ಪ್ರೋಮೋಗಾಗಿ ಕೆಲಸಗಳು ನಡೆಯುತ್ತೀವೆ ಅಂದುಕೊಂಡಂತೆ ಆದರೆ ನವೆಂಬರ್ ನಲ್ಲಿ ಪ್ರೋಮೋ ಬಿಡುಗಡೆ ಮಾಡುತ್ತೇವೆ ಎಂದು ಜನ್ಯ ಹೇಳಿದ್ದಾರೆ. 
ಹೆಬ್ಬುಲಿ ಚಿತ್ರದ ಜತೆಗೆ ಅರ್ಜುನ್ ಜನ್ಯ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರ ಸೇರಿದಂತೆ ಮುಂಗಾರು ಮಳೆ 2, ಪಟಾಕಿ, ಟೈಗರ್, ಪಾಪು, ಮಾರುತಿ 800, ಲಕ್ಷ್ಮಣ, ನಾನೇ ಸಿಎಂಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ