ಬಿಗ್ ಬಾಸ್ ಆಯ್ಕೆಯಾಗಿರುವ ಮಂದಾನ ಕಿರಿಮಿ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಬಿಗ್‍ಬಾಸ್‍ನಲ್ಲೊಬ್ಬಳು ಕೂಲ್ ಇರಾನಿ ಚೆಲುವೆ

ಸಲ್ಮಾನ್‍ಖಾನ್ ನಿರೂಪಣೆ ಮಾಡುತ್ತಾರೆ, ಅಮಿತಾಭ್ ಹಾಡಿದ್ದಾರೆ ಎಂದೆಲ್ಲಾ ಸುದ್ದಿ ಮಾಡಿದ ಬಿಗ್‍ಬಾಸ್‍ನ 9 ಸೀಸನ್ ಶುರುವಾಗಿದೆ...

ಸಲ್ಮಾನ್‍ಖಾನ್ ನಿರೂಪಣೆ ಮಾಡುತ್ತಾರೆ, ಅಮಿತಾಭ್ ಹಾಡಿದ್ದಾರೆ ಎಂದೆಲ್ಲಾ ಸುದ್ದಿ ಮಾಡಿದ ಬಿಗ್‍ಬಾಸ್‍ನ 9 ಸೀಸನ್ ಶುರುವಾಗಿದೆ.

ಆದರೆ ಹೆಚ್ಚೇನು ಸುದ್ದಿ ಮಾಡಿದಂತೆ ಕಾಣುತ್ತಿಲ್ಲ. ಯಾಕೆಂದರೆ ಈ ಬಾರಿ ಸ್ಪರ್ಧೆಗೆ ಇಳಿದವರು ದಕ್ಷಿಣ ಭಾರತದ ಪ್ರೇಕ್ಷಕರಲ್ಲಿ ಯಾವ ಕುತೂಹಲವನ್ನು ಹುಟ್ಟಿಸುವಷ್ಟು ಪರಿಚಿತರಲ್ಲ. ಆದರೆ ಇಡೀ   ಬಿಗ್ ಬಾಸ್ ಮನೆಯನ್ನು ಕುತೂಹಲದಿಂದ ನೋಡುವಂತೆ ಮಾಡಿರುವುದು ಒಬ್ಬಾಕೆ. ಕ್ಯಾಕೂಲ್ ಹೈ ಹಮ್ 3 ಚಿತ್ರದ ಇರಾನಿ ಚೆಲುವೆ ಮಂದನಾ ಕರಿಮಿ. ಭಾಗ್ ಜಾನಿ ಎಂಬ ಚಿತ್ರದ ಮೂಲಕ  ಬಾಲಿವುಡ್‍ಗೆ ಕಾಲಿಟ್ಟ ಈಕೆ, ಬಿಗ್ ಬಾಸ್ ಮೂಲಕ ಮನೆ ಮನೆ ತಲುಪಿದ್ದಾಳೆ. ಹಾಗಂತ ಅವಕಾಶವಿಲ್ಲವೆಂದು ಬಿಗ್‍ಬಾಸ್‍ಗೆ ಬಂದಿದ್ದಲ್ಲ ಎಂಬುದು ಆಕೆಯ ವಾದ. ಜನ ನನ್ನನ್ನು  ನೋಡುತ್ತಿರಬೇಕು.

ಬಿಗ್‍ಬಾಸ್ ಮೂಲಕ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂಬ ಯಾವ ಯೋಚನೆಯೂ ನನಗಿಲ್ಲ. ನನ್ನಲ್ಲಿರುವ ಪ್ರತಿಭೆಗೆ ಇದು ಅವಕಾಶವಾಗಬಹುದು ಎಂದು ಭಾವಿಸಿ ಬಿಗ್‍ಬಾಸ್ ರಿಯಾಲಿಟಿ  ಶೋಗೆ ಬಂದಿದ್ದೇನೆ ಎಂದು ಮೊದಲೇ ಸ್ಪಷ್ಟನೆ ಕೊಟ್ಟಿದ್ದಾಳೆ ಕರಿಮಿ. ಮಂದನ ಬಾಲಿವುಡ್‍ಗೆ ಕಾಲಿಟ್ಟಿದ್ದು ಒಂದು ಮಜಾವಾದ ಕಥೆ. ಮಂದನ ಕರಿಮಿಯ ಅಜ್ಜ ಭಾರತದವರು. ಇರಾನಿ ಪಾರ್ಸಿ  ಮಹಿಳೆಯನ್ನು ಮದುವೆಯಾದರು. ಅವರ ಮಗ ಮದುವೆಯಾಗಿದ್ದು ಟರ್ಕಿ ಹೆಣ್ಣನ್ನು. ಹಾಗಾಗಿ ಈಕೆಯ ಒಂದು ರೀತಿಯಲ್ಲಿ ದೇಶದ ಹುಡುಗಿ. ಪುಣೆಯಲ್ಲಿ ನನ್ನ ಸಂಬಂಧಿಗಳಿದ್ದಾರೆ ಎಂದು ಮಂದನಾ ಬೀಗುವುದೂ ಇದೇ ಕಾರಣಕ್ಕೆ. ಚಿಕ್ಕಂದಿನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಈ ದೇಶವನ್ನು ವಿರೋಧಿಸುತ್ತಿದ್ದಳಂತೆ. ಆದರೆ ಮಾಡೆಲ್ ಆಗಿ ಭರತಕ್ಕೆ ಭೇಟಿ  ನೀಡಲಾರಂಭಿಸಿದ ಮೇಲೆ  ಇದು ಇಷ್ಟದ ದೇಶವಾಯಿತಂತೆ.

ಹಾಗೆಂದು ಸಂದರ್ಶನವೊಂದರಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾಳೆ. ಭಾಗ್ ಜಾನಿ ಚಿತ್ರಕ್ಕೆ ವಿಕ್ರಮ್  ಭಟ್ ಆಡಿಷನ್ ತೆಗೆದುಕೊಂಡಾಗ, ಆಕೆಗೆ ನಟಿಸುವ ಅವಕಾಶ ಸಿಕ್ಕುತ್ತದೆ ಎಂಬ  ವಿಶ್ವಾಸವೇ ಇರಲಿಲ್ಲವಂತೆ. 8 ತಿಂಗಳ ನಂತರ ಕರೆ ಬಂದಾಗ ನಂಬಿಕೆಯಾಗಲಿಲ್ಲವಂತೆ. ಆದರೂ ಭಾಗ್ ಜಾನಿ ನಂತರ ರಾಯ್ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾಳೆ.  ಇನ್ನೇನು ಬಿಡುಗಡೆಗೆ ಸಿದ್ಧಛಿವಾಗಿರುವ ಮೈ ಔರ್ ಚಾಲ್ರ್ಸ್ ಚಿತ್ರದಲ್ಲೂ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾಳೆ. ಏಕ್ತಾ ಕಪೂರ್ ನಿರ್ದೇಶನದ ಕ್ಯಾ ಕೂಲ್ ಹೈ ಹಮ್ ನ 3ನೇ ಭಾಗಕ್ಕೂ  ಆಂಯ್ಕೆಯಾಗಿದ್ದೂ ಈ ಚಿತ್ರವಿನ್ನೂ ತೆರೆಗೆ ಬರುವುದಕ್ಕೆ ಸಾಕಷ್ಟು ಸಮಯವಿದೆ. ಇದರ ನಡುವೆ ಮಂದನಾ ಬಿಗ್‍ಬಾಸ್‍ಗೆ ಎಂಟ್ರಿಕೊಟ್ಟಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT