ಮನೋರಂಜನ್(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

'ರಣಧೀರ ಪ್ರೇಮಲೋಕದಲ್ಲಿ' ಮನೋರಂಜನ್ ನ ಮೊದಲ ಚಿತ್ರ ಅಲ್ಲ?

ರಣಧೀರ ಪ್ರೇಮಲೋಕದಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಲಿದ್ದು, ಇದಕ್ಕೂ ಮುನ್ನ ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ ಮನೋರಂಜನ್ ನಟನೆಯ ಬಿಡುಗಡೆಯಾಗಲಿರುವ ಮೊದಲನೇ ಚಿತ್ರವಾಗಿರಲಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್, ರಣಧೀರ ಪ್ರೇಮಲೋಕದಲ್ಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾಗುವ ಸಾಧ್ಯತೆಗಳಿಲ್ಲ.
ರವಿಚಂದ್ರನ್ ಮಾರ್ಗದರ್ಶನದಲ್ಲಿ ತಯಾರಾಗುತ್ತಿರುವ ರಣಧೀರ ಪ್ರೇಮಲೋಕದಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಲಿದ್ದು, ಇದಕ್ಕೂ ಮುನ್ನ ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ ಮನೋರಂಜನ್ ನಟನೆಯ ಬಿಡುಗಡೆಯಾಗಲಿರುವ ಮೊದಲನೇ ಚಿತ್ರವಾಗಿರಲಿದೆ.
ರಣಧೀರ ಪ್ರೇಮಲೋಕದಲ್ಲಿ ಚಿತ್ರವನ್ನು ಕಳೆದ ವರ್ಷ ಮೇ.30 ರಂದು ಘೋಷಣೆ ಮಾಡಲಾಗಿತ್ತು. ಆದರೆ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಹಾಗೂ ಇನ್ನಿತರ ಚಿತ್ರಗಳಲ್ಲಿ ರವಿಚಂದ್ರನ್ ಕಾರ್ಯನಿರತರಾಗಿದ್ದರಿಂದ ಮನೋರಂಜನ್ ನಟನೆಯ ಚಿತ್ರದ ಬಗ್ಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಯಣ್ಣ-ಭೋಗೇಂದ್ರ ಅವರೊಂದಿಗೆ ರವಿಚಂದ್ರನ್ ನಡುವೆ ಮಾತುಕತೆ ನಡೆದಿದೆ. ಆದರೆ ಈ ವರೆಗೂ ಅಧಿಕೃತ ಮಾಹಿತಿ ಹೊರಬಂದಿಲ್ಲ.
ರಣಧೀರ ಪ್ರೇಮಲೋಕದಲ್ಲಿ ಚಿತ್ರಕ್ಕೂ ಮುನ್ನ ಅಪೂರ್ವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ರವಿಚಂದ್ರನ್ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮನೋರಂಜನ್ ನಟನೆಯ ರಣಧೀರ ಪ್ರೇಮಲೋಕದಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಲಿದೆ.  ರಣಧೀರ ಪ್ರೇಮಲೋಕದಲ್ಲಿ ಚಿತ್ರಕ್ಕೂ ಮುನ್ನ ಮನೋರಂಜನ್ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video