ರಣಧೀರ-ಪ್ರೇಮಲೋಕದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಪಾದಾರ್ಪಣೆ ಚಿತ್ರವೆಂದೇ ಪರಿಗಣಿಸ್ಪಟ್ಟಿತ್ತು. ಆದರೆ ಈ ಚಿತ್ರಕ್ಕೂ ಮುನ್ನ ಜಯಣ್ಣ ಕಂಬೈನ್ಸ್ ನಲ್ಲಿ ಮನೋರಂಜನ್ ಅಭಿನಯಿಸುತ್ತಿರುವುದು ಅಧಿಕೃತವಾಗಿದೆ.
ನಟ ಮುರಳಿ ಅಭಿನಯದ ಕಂಠಿ ಚಿತ್ರವನ್ನು ನಿರ್ದೇಶಿಸಿದ್ದ ಭರತ್ ಅವರು ಮನೋರಂಜನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ರವಿಚಂದ್ರನ್ ಗರಡಿಯ ಖ್ಯಾತ ಛಾಯಾಗ್ರಾಹಕ ಜಿಎಸ್ ವಿ ಸೀತಾರಾಂ ಅವರ ಕಣ್ಣಲ್ಲಿ ಚಿತ್ರ ಸೆರೆಯಾಗಲಿದೆ.
ಕಳೆದ ಕೆಲ ತಿಂಗಳಿನಿಂದ ರವಿಚಂದ್ರನ್, ಮನೋರಂಜನ್ ಜತೆ ಚರ್ಚಿಸಿದ್ದು, ಉತ್ತಮ ಕಥೆಗಾಗಿ ಕಾಯುತ್ತಿದ್ದೇವು. ಇದೇ ವೇಳೆ ಭರತ್ ಅವರು ಸಖತ್ ಸ್ಟೋರಿಯೊಂದನ್ನು ರೆಡಿ ಮಾಡಿದ್ದು, ಚಿತ್ರಕ್ಕೆ ಕ್ರೇಜಿಸ್ಟಾರ್ ಕೂಡ ಓಕೆ ಅಂದಿದ್ದಾರೆ ಎಂದು ಜಯಣ್ಣ ತಿಳಿಸಿದ್ದಾರೆ.