ಬೆಂಗಳೂರು: ಮಿ ಅಂಡ್ ಮಿಸಸ್ ರಾಮಾಚಾರಿ ಸಿನೆಮಾದ ಅಭೂತಪೂರ್ವ ಯಶಸ್ಸಿನ ನಂತರ ಯಶ್ ಮತ್ತು ರಾಧಿಕಾ ಪಂಡಿತ್ ಮತ್ತೆ ಒಂದಾಗಿದ್ದಾರೆ.
ಮಹೇಶ್ ರಾವ್ ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಇಬ್ಬರೂ ನಟಿಸುತ್ತಿರುವುದನ್ನು ಧೃಢೀಕರಿಸಿದ ರಾಧಿಕಾ "ಹೌದು ಯಶ್ ಜೊತೆ ಮತ್ತೆ ಕೆಲಸ ಮಾಡಲಿದ್ದೇನೆ. ಸಿನೆಮಾದ ಚಿತ್ರೀಕರಣ ಡಿಸೆಂಬರ್ ನಿಂದ ಪ್ರಾರಂಭವಾಗಲಿದೆ" ಎಂದಿದ್ದಾರೆ. ಕೆ ಮಂಜು ಸಿನೆಮಾದ ನಿರ್ಮಾಪಕ.
ಈ ಇಬ್ಬರೂ ಒಟ್ಟಿಗೆ ನಟಿಸಿದ ಮೊಗ್ಗಿನ ಮನಸ್ಸು ಮತ್ತು ಡ್ರಾಮಾ ಕೂಡ ಬಹಳ ಯಶಸ್ವಿಯಾಗಿದ್ದವು. "ನಮ್ಮಿಬ್ಬರ ಜೋಡಿ ಹಿಟ್ ಆಗುತ್ತಿದೆ ಎಂದಷ್ಟೇ ನಾವಿಬರೂ ಒಟ್ಟಿಗೆ ಕೆಲಸ ಮಾಡುತ್ತಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ" ಎಂದು ತಿಳಿಸುತ್ತಾರೆ ರಾಧಿಕಾ.
ಸದ್ಯಕ್ಕೆ ರಾಧಿಕಾ, ಪುನೀತ್ ರಾಜಕುಮಾರ್ ಜೊತೆಗೆ 'ದೊಡ್ಮನೆ ಹುಡುಗ' ಸಿನೆಮಾದ ಚಿತ್ರೀಕರಣ ಮುಗಿಸಬೇಕಿದೆ.
ದಿನಾಂಕಗಳು ಸಿಗದೇ ಹೋಗಿದ್ದರಿಂದ ಮಹೇಶ್ ಅವರು ನೀಡಿದ್ದ ಎರಡು ಅವಕಾಶಗಳನ್ನು ತಿರಸ್ಕರಿಸಬೇಕಾಗಿ ಬಂದಿತ್ತು ಎಂದು ವಿವರಿಸುವ ರಾಧಿಕಾ "ಕೊನೆಗೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗುತ್ತಿದೆ. 'ಒಲವೆ ಜೀವನ ಲೆಕ್ಕಾಚಾರ'ದ ನಂತರ ಮಂಜು ಜೊತೆಗೆ ಇದು ನನ್ನ ಎರಡನೆ ಸಿನೆಮಾ" ಎಂದು ವಿವರಿಸುತ್ತಾರೆ.