ಬಿಗ್ ಬಾಸ್ ಕನ್ನಡ ಅವತರಣಿಕೆಯ ಮೂರನೇ ಸರಣಿ ಇದೇ ಭಾನುವಾರದಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ. ಈ ಹಿಂದಿನಂತೆ ಕಾರ್ಯಕ್ರಮ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಾ ಬಂದಿದೆ. ಈ ಬಾರಿ ಬಿಗ್ ಬಾಸ್ ನಡೆಯುವ ಸ್ಥಳ ಬೆಂಗಳೂರಿಗೆ ಸಮೀಪ ಬಿಡದಿಯಲ್ಲಿ. ಇನ್ನೋವೇಟಿವ್ ಫಿಲ್ಮ್ ಸಿಟಿ ಹತ್ತಿರ 14 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಒಂದೂಕಾಲು ಕೋಟಿ ರೂಪಾಯಿ ವೆಚ್ಚದಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗಿದೆ. ಸುಮಾರು ಎರಡೂವರೆ ಸಾವಿರ ಜನರು ಒಟ್ಟಿಗೆ ಕುಳಿತು ಶೋವನ್ನು ವೀಕ್ಷಿಸಬಹುದಾಗಿದೆ.
ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುತ್ತಾರೆ ಎಂಬ ಬಗ್ಗೆ ಚಾನೆಲ್ ಇದುವರೆಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೂ ಹಲವರ ಹೆಸರುಗಳು ಕೇಳಿಬರುತ್ತಲೇ ಇವೆ. ಈ ಬಾರಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಒಂದೊಂದು ದಿನ ಒಬ್ಬೊಬ್ಬ ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಲೇ ಇದೆ,
ಬಲ್ಲ ಮೂಲಗಳ ಪ್ರಕಾರ ನಟಿ ಪೂಜಾ ಗಾಂಧಿ ಮತ್ತು ರವಿ ಬೆಳಗೆರೆಯವರ ಮಗಳು ಶ್ರೀನಗರ ಕಿಟ್ಟಿಯ ಪತ್ನಿ ಭಾವನಾ ಬೆಳೆಗೆರೆ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುತ್ತಾರೆ.